ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿರಿಯ ವಯಸ್ಸಿಗೆ ನಿವೃತ್ತಿ ತರವೇ?

Last Updated 29 ಸೆಪ್ಟೆಂಬರ್ 2019, 20:00 IST
ಅಕ್ಷರ ಗಾತ್ರ

ನಿವೃತ್ತಿ ವಯಸ್ಸು 60 ವರ್ಷ ಅಥವಾ ಸರ್ಕಾರಿ ನೌಕರ ಸಲ್ಲಿಸಿದ 33 ವರ್ಷ ಸೇವೆ ಇವುಗಳಲ್ಲಿ ಯಾವುದು ಮೊದಲೋ ಅದರಂತೆ ಆ ನೌಕರನನ್ನು ನಿವೃತ್ತಿಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿರುವುದು ನೌಕರ ವರ್ಗದಲ್ಲಿ ಆತಂಕ ಮೂಡಿಸಿದೆ. ಪ್ರಸ್ತುತ ಕೇಂದ್ರ ಹಾಗೂ ರಾಜ್ಯ ಸರ್ಕಾರಿ ನೌಕರರ ನಿವೃತ್ತಿ ವಯಸ್ಸು 60 ವರ್ಷ ಇದೆ. ಯಾವುದೇ ವಯಸ್ಸಿನಲ್ಲಿ ಕೆಲಸಕ್ಕೆ ಸೇರಿದ ನೌಕರ ತನ್ನ 60ನೇ ವಯಸ್ಸಿನಲ್ಲಿ ನಿವೃತ್ತನಾಗುತ್ತಾನೆ. ಸರ್ಕಾರದ ಈ ನಿರ್ಧಾರ ಎಲ್ಲಾ ನೌಕರರಿಗೂ ಒಪ್ಪಿಗೆ ಹಾಗೂ ನ್ಯಾಯಸಮ್ಮತ ಕೂಡ. ಆದರೆ ಅತಿ ಕಿರಿಯ ವಯಸ್ಸಿನಲ್ಲಿ ಕೆಲಸಕ್ಕೆ ಸೇರಿದ ನೌಕರರಿಗೆ ತಮ್ಮ ಸೇವೆಯಲ್ಲಿ 33 ವರ್ಷ ಸೇವೆ ಸಲ್ಲಿಸಿದಾಕ್ಷಣದಿಂದ ನಿವೃತ್ತಿ ನೀಡುವುದು ಎಷ್ಟು ಸರಿ?

ಇದರಲ್ಲಿ ಸರಾಸರಿ 20 ಹಾಗೂ 22ನೇ ವಯಸ್ಸಿಗೆ ಉದ್ಯೋಗಕ್ಕೆ ಸೇರಿದವರಿಗೆ 33 ವರ್ಷ ಸೇವಾವಧಿಯನ್ನು ಪರಿಗಣಿಸಿದರೆ, ಆ ನೌಕರರು ತಮ್ಮ 53ರಿಂದ 55ನೇ ವಯಸ್ಸಿಗೆ ನಿವೃತ್ತರಾಗಬೇಕಾಗುತ್ತದೆ. ಯಾವುದೇ ನೌಕರ ನಿವೃತ್ತಿಯ ಅಂಚಿನಲ್ಲಿ ತನ್ನ ಕುಟುಂಬ ಸದಸ್ಯರನ್ನು ಒಂದು ಹಂತಕ್ಕೆ ತರುವಲ್ಲಿ ಹೆಚ್ಚು ಜವಾಬ್ದಾರಿ ಹೊತ್ತಿರುತ್ತಾನೆ. ಆ ನಿಟ್ಟಿನಲ್ಲಿ ಕಾರ್ಯಮಗ್ನ ಆಗಿರುವ ಸಮಯದಲ್ಲೇ ಆತನ ಸೇವೆಯನ್ನು 33 ವರ್ಷಗಳಿಗೆ ಕಡಿತಗೊಳಿಸಿದರೆ ಆತನ ಇಡೀ ಕುಟುಂಬವನ್ನು ಕಷ್ಟಕ್ಕೆ ಸಿಲುಕಿಸಿದಂತೆ ಆಗುತ್ತದೆ. ಇಷ್ಟಕ್ಕೂ ರಾಜಕಾರಣದಲ್ಲಿ 60, 65 ಹಾಗೂ 70 ವರ್ಷ ದಾಟಿದವರೂ ದೇಶವನ್ನು ಸಮರ್ಥವಾಗಿ ಮುನ್ನಡೆಸಿ ಆಳ್ವಿಕೆ ಮಾಡುತ್ತಿರುವ ಉದಾಹರಣೆಗಳು ನಮ್ಮ ಕಣ್ಮುಂದೆ ಇವೆ. ಹೀಗಿರುವಾಗ ನೌಕರರ ಸೇವೆಯನ್ನು ಮಾತ್ರ 33 ವರ್ಷಕ್ಕೆ ಸೀಮಿತಗೊಳಿಸುವುದು ಎಷ್ಟು ಸರಿ?

–ಹರಳಹಳ್ಳಿ ಪುಟ್ಟರಾಜು,ಪಾಂಡವಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT