ಶನಿವಾರ, ನವೆಂಬರ್ 23, 2019
18 °C

ಅಲೆದಾಟ ತಪ್ಪಿಸುವ ಕ್ರಮ

Published:
Updated:

ಆನ್‌ಲೈನ್‌ನಲ್ಲೇ ಋಣಭಾರ ಪತ್ರ (ಇ.ಸಿ) ಪಡೆದುಕೊಳ್ಳುವ ಅವಕಾಶ ಮಾಡಿಕೊಡುವ ಕಂದಾಯ ಇಲಾಖೆಯ ಕ್ರಮ ಸ್ವಾಗತಾರ್ಹ.

ಆಸ್ತಿ ಖರೀದಿ ಹಾಗೂ ಇತರ ವಿಷಯಗಳಿಗೆ ಸಂಬಂಧಪಟ್ಟಂತೆ ಇ.ಸಿ ಪಡೆಯಲು ಈವರೆಗೆ ಉಪ ನೋಂದಣಾಧಿಕಾರಿ ಕಚೇರಿಗೆ ಅರ್ಜಿ ಕೊಟ್ಟು ವಾರಗಟ್ಟಲೆ ಅಲೆಯಬೇಕಾಗಿತ್ತು. ಇಂತಹ ಅಲೆದಾಟವನ್ನು ತಪ್ಪಿಸಲು ಮುಂದಾಗಿರುವ ಕಂದಾಯ ಸಚಿವ ಆರ್.ಅಶೋಕ ಅವರಿಗೆ ಧನ್ಯವಾದ. ಅಧಿಕಾರಿಗಳು ಇದಕ್ಕೆ ಸ್ಪಂದಿಸಿ, ಜನಸಾಮಾನ್ಯರ ಬವಣೆ ತಪ್ಪಿಸಲು ಅವಕಾಶ ಮಾಡಿಕೊಡಲಿ.

-ಅ.ಮೃತ್ಯುಂಜಯ, ಪಾಂಡವಪುರ

 

ಪ್ರತಿಕ್ರಿಯಿಸಿ (+)