ಕ್ರಾಂತಿಕಾರಕ ನಡೆ

7

ಕ್ರಾಂತಿಕಾರಕ ನಡೆ

Published:
Updated:
ಸಾಂದರ್ಭಿಕ ಚಿತ್ರ

ದೆಹಲಿಯಲ್ಲಿ ನಲವತ್ತು ಅಗತ್ಯ ಸರ್ಕಾರಿ ಸೇವೆಗಳನ್ನು ಮನೆ ಬಾಗಿಲಿಗೇ ತಲುಪಿಸುವ ‘ಹೋಮ್ ಡೆಲಿವರಿ’ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ಆಡಳಿತಾತ್ಮಕವಾಗಿ ಇದೊಂದು ಕ್ರಾಂತಿಕಾರಕ ನಡೆ. ಇದರಿಂದ ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ. ಈ ಯೋಜನೆ ವ್ಯವಸ್ಥಿತವಾಗಿ ಹಾಗೂ ಪರಿಣಾಮಕಾರಿಯಾಗಿ ಅನುಷ್ಠಾನಗೊಂಡಿದ್ದೇ ಆದಲ್ಲಿ ಸರ್ಕಾರಿ ಕಚೇರಿಗಳಿಗೆ ಸಾರ್ವಜನಿಕರ ಅನಗತ್ಯ ಅಲೆದಾಟ ತಪ್ಪಿದಂತಾಗುತ್ತದೆ. ಈ ಮೂಲಕ ಸಾರ್ವಜನಿಕರ ಅಮೂಲ್ಯವಾದ ಸಮಯ ಉಳಿತಾಯವಾಗಿ, ಅದು ಇನ್ನಿತರ ಉತ್ಪಾದಕ ಕಾರ್ಯಗಳಿಗೆ ಬಳಕೆಯಾದಂತಾಗುತ್ತದೆ. ನಮ್ಮ ರಾಜ್ಯದಲ್ಲೂ ಈ ಮಾದರಿಯ ಕಾರ್ಯಕ್ರಮ ಅನುಷ್ಠಾನವಾಗಬೇಕಿದೆ.

ನಮ್ಮಲ್ಲಿ ಕೆಲ ಸರ್ಕಾರಿ ಸೇವೆಗಳನ್ನು ಪಡೆಯಲು ಇನ್ನೂ ಯಾವುದೋ ಕಾಲದ ನಿಯಮಗಳನ್ನೇ ಅನುಸರಿಸಲಾಗುತ್ತಿದೆ. ಕಾಗದದಲ್ಲಿ ಹತ್ತಾರು ದಾಖಲೆಗಳನ್ನು ನೀಡಬೇಕಾಗುತ್ತದೆ. ಅವುಗಳನ್ನು ವಿವಿಧ ಸ್ತರದ ಅಧಿಕಾರಿಗಳು ವಿವಿಧ ಹಂತಗಳಲ್ಲಿ ಅನುಮೋದಿಸಬೇಕಾಗುತ್ತದೆ. ಈ ಕಾರಣದಿಂದಾಗಿಯೇ ‘ಸಕಾಲ’ ಹೊರತುಪಡಿಸಿದ ಸರ್ಕಾರಿ ಸೇವೆಗಳನ್ನು ಪಡೆಯುವಲ್ಲಿ ವಿಪರೀತ ವಿಳಂಬವಾಗುತ್ತಿದೆ. ಇನ್ನೊಂದೆಡೆ ಇದು ಪರೋಕ್ಷವಾಗಿ ಭ್ರಷ್ಟಾಚಾರವನ್ನೂ ಪೋಷಿಸುತ್ತಿದೆ. ಇಂದು ಪ್ರತಿಯೊಂದು ಕ್ಷೇತ್ರವನ್ನೂ ತಂತ್ರಜ್ಞಾನ ಆವರಿಸಿಕೊಂಡಿದೆ. ಇದನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕಾಗಿದೆ. ಕಾಗದರಹಿತ ಪಾರದರ್ಶಕ ಆಡಳಿತಕ್ಕಾಗಿ ಎಲ್ಲ ನಾಗರಿಕ ಸೇವೆಗಳನ್ನೂ ಆನ್‌ಲೈನ್‌ಗೊಳಿಸಿ, ನಾಗರಿಕರ ಮನೆ ಬಾಗಿಲಿಗೇ ಸರ್ಕಾರಿ ಸೇವೆಗಳನ್ನು ಒದಗಿಸಬೇಕಿದೆ.

ಪ್ರಶಾಂತ ಎಂ. ಕುನ್ನೂರ, ಮಾಗಣಗೇರಾ, ಯಡ್ರಾಮಿ

ಬರಹ ಇಷ್ಟವಾಯಿತೆ?

 • 16

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !