ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಡಬದಿಯಲ್ಲಿ ಸಾಗುವವರು...

Last Updated 18 ಫೆಬ್ರುವರಿ 2020, 20:00 IST
ಅಕ್ಷರ ಗಾತ್ರ

ಸಚಿವ ಆರ್.ಅಶೋಕ ಅವರ ಪುತ್ರ ಇದ್ದರು ಎಂದು ಹೇಳಲಾಗುವ ಅಪಘಾತದ ಕೆಲವು ವಿಡಿಯೊ ತುಣುಕುಗಳಲ್ಲಿ ಒಂದು ವಿಡಿಯೊ ತುಣುಕಿನ ಬಗೆಗೆ ಹೇಳಬಯಸುತ್ತೇನೆ. ಅಪಘಾತವಾದ ಸ್ಥಳದ ಸಮೀಪ ಇರುವ ಪೆಟ್ರೋಲ್ ಬಂಕಿನ ಸಿ.ಸಿ ಟಿ.ವಿ ಕ್ಯಾಮೆರಾದ ಆಧಾರದ ಮೇಲೆ ಮಾಧ್ಯಮದವರು, ಪಕ್ಕದಲ್ಲಿ ಸಾಗುತ್ತಿರುವ ಲಾರಿಯನ್ನು ಹಿಂದಕ್ಕೆ ಹಾಕುವ ಸಲುವಾಗಿ ಕಾರನ್ನು ಎಡಗಡೆಯಿಂದ ನುಗ್ಗಿಸಲು ಹೋದದ್ದು ಅಪಘಾತಕ್ಕೆ ಕಾರಣ ಎಂದು ಹೇಳುತ್ತಿದ್ದಾರೆ. ಈ ಘಟನೆಯ ಬಗ್ಗೆ ನಾನು ಏನನ್ನೂ ಹೇಳುವುದಿಲ್ಲ. ಆದರೆ ಎಡಗಡೆಯಿಂದ ಮುನ್ನುಗ್ಗುವ ಪರಿಸ್ಥಿತಿ ಹೇಗೆ ಉಂಟಾಗಬಹುದು ಎಂದು ನನ್ನ ಅನುಭವದ ಆಧಾರದಿಂದ ಹೇಳುತ್ತೇನೆ.

ಹೆದ್ದಾರಿಯಲ್ಲಿ ಸಾಗುವ ಹೆಚ್ಚಿನ ಲಾರಿಗಳು ಎಂದೂ ಎಡಗಡೆಯಿಂದ ಸಾಗುವುದಿಲ್ಲ. ಅವು ಬಲಭಾಗದಲ್ಲಿ ನಿಧಾನಕ್ಕೆ ಸಾಗುವುದರಿಂದ ಅವುಗಳನ್ನು ಹಿಂದೆ ಹಾಕಿ ಮುಂದಕ್ಕೆ ಹೋಗಲೇ ಬೇಕಾಗುತ್ತದೆ. ಈ ಅನಿವಾರ್ಯ ಕಾರಣದಿಂದ, ಬೇರೆಲ್ಲೂ ಎಡಗಡೆಯಿಂದ ಮುನ್ನುಗ್ಗದವರೂ ಇಲ್ಲಿ ಎಡಗಡೆಯಿಂದಲೇ ಮುನ್ನುಗ್ಗಬೇಕಾಗುತ್ತದೆ. ಲಾರಿಯವರು ಎಂದೂ ಬಲಗಡೆಯಿಂದ ಸಾಗದಂತೆ ಅವರನ್ನು ಶಿಕ್ಷೆಗೆ ಒಳಪಡಿಸಲು ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು.

–ಡಾ. ಈಶ್ವರ ಶಾಸ್ತ್ರಿ ಮೋಟಿನಸರ,ಶಿರಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT