ಗುರುವಾರ , ನವೆಂಬರ್ 14, 2019
19 °C

ರಸ್ತೆ ನಿರ್ವಹಣೆ ವೈಫಲ್ಯದ ಹೊಣೆ ಯಾರದು?

Published:
Updated:

ಕೇಂದ್ರ ಸರ್ಕಾರವು ಹೊಸ ಮೋಟಾರು ವಾಹನ ನಿಯಮ ಜಾರಿಗೆ ತಂದಿದೆ. ಅಜಾಗರೂಕ ಮತ್ತು ನಿರ್ಲಕ್ಷ್ಯದ ಚಟುವಟಿಕೆಗಳಿಗೆ ಭಾರಿ ಮೊತ್ತದ ದಂಡ ವಿಧಿಸಲು ಅವಕಾಶ ಕಲ್ಪಿಸಲಾಗಿದೆ.

ಅಪಘಾತಗಳನ್ನು ನಿಯಂತ್ರಿಸಲು ಇಂತಹದ್ದೊಂದು ಕ್ರಮ ಸ್ವಾಗತಾರ್ಹ. ಆದರೆ ಅಪಘಾತಕ್ಕೆ ಅತಿವೇಗ, ನಿರ್ಲಕ್ಷ್ಯ ಮಾತ್ರ ಕಾರಣವೇ? ನಮ್ಮ ಎಲ್ಲಾ ರಸ್ತೆಗಳು ಉತ್ತಮ ಗುಣಮಟ್ಟ ಹೊಂದಿವೆಯೇ? ವಾಹನಗಳ ನಿಲುಗಡೆಗೆ ಅಧಿಕಾರಸ್ಥರು ಸೂಕ್ತ ವ್ಯವಸ್ಥೆ ಕಲ್ಪಿಸಿ
ದ್ದಾರೆಯೇ? ರಸ್ತೆ ಮಧ್ಯೆ ಎಷ್ಟೋ ಕಡೆ ವಿಭಜಕಗಳೇ ಇರುವುದಿಲ್ಲ. ಎಲ್ಲೆಂದರಲ್ಲಿ ಗುಂಡಿಗಳು. ಅವೈಜ್ಞಾನಿಕ ರಸ್ತೆ ಉಬ್ಬುಗಳು.

ಕೆಲವು ವೃತ್ತಗಳಲ್ಲಿ ಸಿಗ್ನಲ್ ದೀಪಗಳೇ ಇರುವುದಿಲ್ಲ. ಇದ್ದರೂ ಸಮರ್ಪಕವಾಗಿ ಕಾರ್ಯನಿರ್ವಹಿಸುವುದಿಲ್ಲ. ಸರ್ಕಾರದ ಕಡೆಯಿಂದ ಇಷ್ಟೆಲ್ಲಾ ತಪ್ಪುಗಳು ಕಾಣಸಿಗುತ್ತವೆ. ಅವುಗಳಿಗೆ ಹೊಣೆ ಯಾರು? ಅವುಗಳಿಂದ ಆಗುವ ಸಾವು–ನೋವಿಗೆ ಯಾರಿಗೆ ಶಿಕ್ಷೆ ವಿಧಿಸಬೇಕು? ಇಷ್ಟೆಲ್ಲ ಹುಳುಕು ಇಟ್ಟುಕೊಂಡು ಜನಸಾಮಾನ್ಯರಿಗೆ ಭಾರಿ ಮೊತ್ತದ ದಂಡ ವಿಧಿಸುವುದು ನೈತಿಕವಾಗಿ ಸರಿಯೇ? ಮಿಗಿಲಾಗಿ, ದಂಡ ಹೆಚ್ಚಳವು ಭಾರಿ ಭ್ರಷ್ಟಾಚಾರಕ್ಕೂ ದಾರಿ ಮಾಡಿಕೊಡುವ ಸಾಧ್ಯತೆ ಇದೆ ಎಂಬುದು ಸರ್ಕಾರಕ್ಕೆ ಗೊತ್ತಿಲ್ಲವೇ?

ಮುರುಗೇಶ ಡಿ., ದಾವಣಗೆರೆ

ಪ್ರತಿಕ್ರಿಯಿಸಿ (+)