ಮತದಾರರ ಸೆಳೆಯಲು ಸಖಿ ಮತಗಟ್ಟೆ

ಗುರುವಾರ , ಏಪ್ರಿಲ್ 25, 2019
31 °C

ಮತದಾರರ ಸೆಳೆಯಲು ಸಖಿ ಮತಗಟ್ಟೆ

Published:
Updated:
Prajavani

ಪ್ರಜಾವಾಣಿ ಸಂದರ್ಶನದಲ್ಲಿ ಸ್ವೀಪ್‌ ಸಮಿತಿ ಸಮಾಲೋಚಕ ಪಿ.ಎಸ್‌. ವಸ್ತ್ರದ
**

* ಸಖಿ ಮತಗಟ್ಟೆಗಳು ಎಂದರೆ ಏನು? ರಾಜ್ಯದಲ್ಲಿ ಇಂತಹ ಎಷ್ಟು ಮತಗಟ್ಟೆಗಳು ಇವೆ?

ಮಹಿಳಾ ಸಿಬ್ಬಂದಿಯೇ ನಿರ್ವಹಿಸುವ ಮತಗಟ್ಟೆಗಳಿಗೆ ‘ಸಖಿ’ ಮತಗಟ್ಟೆ ಎಂಬ ಹೆಸರಿಟ್ಟಿದ್ದೇವೆ. ರಾಜ್ಯದಲ್ಲಿ 639 ಸಖಿ ಮತಗಟ್ಟೆಗಳನ್ನು ತೆರೆಯಲಾಗುತ್ತಿದೆ. ಮತಗಟ್ಟೆ ಅಧಿಕಾರಿ, ಸಹಾಯಕರು, ಪೊಲೀಸ್ ಸಿಬ್ಬಂದಿ ಸೇರಿ ಎಲ್ಲರೂ ಮಹಿಳೆಯರೇ ಕಾರ್ಯ ನಿರ್ವಹಿಸಲಿದ್ದಾರೆ. ಕಳೆದ ವರ್ಷ ಈ ಮತಗಟ್ಟೆಗಳಿಗೆ ‘ಪಿಂಕ್’ ಮತಗಟ್ಟೆಗಳು ಎಂಬ ಹೆಸರಿಡಲಾಗಿತ್ತು. ಸಖಿ ಮತಗಟ್ಟೆಗಳಲ್ಲಿ ಪುರುಷರೂ ಮತ ಚಲಾಯಿಸಬಹುದು.

* ಸಖಿ ಮತಗಟ್ಟೆಗಳನ್ನು ತೆರೆಯುವುದರ ಹಿಂದಿನ ಉದ್ದೇಶ ಏನು?

ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಇರುವ ಮತಗಟ್ಟೆಗಳನ್ನು ಗುರುತಿಸಿ ಈ ಹೆಸರಿಡಲಾಗಿದೆ. ಮಹಿಳಾ ಮತದಾರರನ್ನು ಆಕರ್ಷಿಸುವ ಉದ್ದೇಶ ಇದರ ಹಿಂದಿದೆ.

* ಬೇರೆ ಮತಗಟ್ಟೆಗಳಿಗೂ ಸಖಿ ಮತಗಟ್ಟೆಗಳಿಗೂ ಇರುವ ವ್ಯತ್ಯಾಸವೇನು? ಏನೇನು ಸೌಲಭ್ಯಗಳಿರುತ್ತವೆ?

ಸಿಬ್ಬಂದಿಯೇ ಮತಗಟ್ಟೆಗಳ ಮುಂದೆ ಬಣ್ಣ ಬಣ್ಣದ ರಂಗೋಲಿ ಬಿಡಿಸಿ, ಹೂಗಳಿಂದ ಅಲಂಕರಿಸುತ್ತಾರೆ. ಮತದಾನಕ್ಕೆ ಸಾಲಿನಲ್ಲಿ ನಿಲ್ಲುವವರಿಗೆ ನೆರಳು, ಕುಡಿಯುವ ನೀರು, ಶೌಚಾಲಯ, ಅಂಗವಿಕಲರಿಗಾಗಿ ರ‍್ಯಾಂಪ್‌ಗಳು ಸೇರಿದಂತೆ ಎಲ್ಲ ರೀತಿಯ ಸೌಲಭ್ಯಗಳೂ ಇರಲಿವೆ.

* ಅಂಗವಿಕಲರೇ ನಿರ್ವಹಿಸುವ ಮತಗಟ್ಟೆಗಳು ಎಷ್ಟಿವೆ? ವಿಶೇಷವೇನು?

ಅಂಗವಿಕಲರೇ ನಿರ್ವಹಿಸುವ 90 ಮತಗಟ್ಟೆಗಳನ್ನು ತೆರೆಯಲಾಗುವುದು. ಇಲ್ಲೂ ಸಂಪೂರ್ಣವಾಗಿ ಅಂಗವಿಕಲ ಸಿಬ್ಬಂದಿಯೇ ಇರುತ್ತಾರೆ. ಅಂಗವಿಕಲರು ಹೆಚ್ಚಿನ ಸಂಖ್ಯೆಯಲ್ಲಿರುವ ಕಡೆ ಈ ಮತಗಟ್ಟೆಗಳನ್ನು ತೆರೆಯಲಾಗುವುದು.

* ಎಥ್ನಿಕ್‌ ಮತಗಟ್ಟೆ ಎಂದರೇನು, ಅದು ಹೇಗೆ ಭಿನ್ನ?

ಆದಿವಾಸಿ ಬುಡಕಟ್ಟು ಸಮುದಾಯದವರ ಸಂಪ್ರದಾಯ ಬಿಂಬಿಸುವ 39 ಮತಗಟ್ಟೆಗಳನ್ನು ಚಾಮರಾಜನಗರ, ಮೈಸೂರು, ಕೊಡಗು, ದಕ್ಷಿಣ ಕನ್ನಡ, ಚಿತ್ರದುರ್ಗ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ತೆರೆಯಲಾಗುವುದು. ಆ ಸಮುದಾಯದವರನ್ನು ಮತಗಟ್ಟೆಗೆ ಆಕರ್ಷಿಸುವುದು ಇದರ ಆಶಯ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !