ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಠಗಳ ಪಾವಿತ್ರ್ಯ ಮತ್ತು ಜನತಂತ್ರ

Last Updated 29 ಡಿಸೆಂಬರ್ 2019, 20:02 IST
ಅಕ್ಷರ ಗಾತ್ರ

ಒಂದು ಸಮುದಾಯದ ಮಠಾಧೀಶರೊಬ್ಬರು ಇತ್ತೀಚೆಗೆ, ತಮ್ಮ ಸಮುದಾಯಕ್ಕೆ ಮೀಸಲಾತಿ ಹೆಚ್ಚಳ, ತಮ್ಮ ಸಮುದಾಯದ ಶಾಸಕರಿಗೆ ಉಪಮುಖ್ಯಮಂತ್ರಿ ಸ್ಥಾನ, ಮಂತ್ರಿ ಪಟ್ಟ ಮತ್ತಿತರ ಸೌಲಭ್ಯಗಳಿಗಾಗಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಹಾಗೆ ಕೇಳುವುದು ಅವರ ಹಕ್ಕು. ಆದರೆ ಅದನ್ನು ಪಡೆಯುವ ಹಾದಿಯಲ್ಲಿ ಸರ್ಕಾರಕ್ಕೆ ಗಡುವು ನೀಡುವುದು, ಸರ್ಕಾರವನ್ನು ಬೀಳಿಸುವಂತಹ ಮಾತನ್ನಾಡುವುದು ಪ್ರಜಾಪ್ರಭುತ್ವಕ್ಕೆ ಮಾಡುವ ಅವಮಾನ.

ಅದರ ಬದಲು ಆಯಾ ಮಠಾಧೀಶರು ತಮ್ಮ ಸಮುದಾಯದ ಏಳಿಗೆಗಾಗಿ ಈವರೆಗೆ ತಾವು ಕೈಗೊಂಡ, ಕೈಗೊಳ್ಳ ಬಹುದಾದ ಕಾರ್ಯಕ್ರಮಗಳ ಮಾಹಿತಿಯನ್ನು ಸಾರ್ವಜನಿಕರಿಗೆ ನೀಡಲಿ. ಮಠಗಳ ಲೆಕ್ಕಪತ್ರವನ್ನೂ ಸಾರ್ವಜನಿಕಗೊಳಿಸಿ ಪಾವಿತ್ರ್ಯ ಕಾಪಾಡಲಿ.

ಅದು ಬಿಟ್ಟು, ಜನರನ್ನು ವೋಟ್ ಬ್ಯಾಂಕ್ ಕಾರಣಕ್ಕಾಗಿ ರಾಜಕಾರಣಿಗಳಿಗಿಂತಲೂ ಹೆಚ್ಚಾಗಿ ಮಠಾಧೀಶರೇ ತಮ್ಮ ತಮ್ಮ ಸಮುದಾಯಗಳ ಜನಪ್ರತಿನಿಧಿಗಳನ್ನು ಬಳಸಿಕೊಳ್ಳುತ್ತಿರುವುದು ಸರಿಯಲ್ಲ.
-ಬಿ.ಶ್ರೀನಿವಾಸ,ರಾಣೆಬೆನ್ನೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT