ಮಂಗಳವಾರ, ಜನವರಿ 18, 2022
16 °C

ವಾಚಕರವಾಣಿ: ಅರಿಯಬೇಕಿದೆ ರಾಜಕೀಯ ಹಿತಾಸಕ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಸರ್ಕಾರಿ ಕಾಲೇಜಿನಲ್ಲಿ ಉಂಟಾಗಿರುವ ಸ್ಕಾರ್ಫ್‌- ಕೇಸರಿ ಶಾಲಿನ ವಿವಾದ ಆತಂಕಕಾರಿಯಾಗಿದೆ. ಸ್ಕಾರ್ಫ್‌ ಕೇವಲ ಮುಸಲ್ಮಾನರ ಉಡುಗೆಯಾಗಿರದೆ ಇತರರೂ ಬಳಸುವುದನ್ನು ಕಾಣಬಹುದು. ಆದರೆ, ಕೇಸರಿ ಶಾಲು ಹಿಂದೂಗಳ ಪಾರಂಪರಿಕ ಉಡುಗೆಯ ಭಾಗ ಖಂಡಿತಾ ಅಲ್ಲ (ಕೇಸರಿ ಸನ್ಯಾಸತ್ವದ ಸಂಕೇತ ಎಂದು ಪರಿಗಣಿಸಬಹುದಾದರೂ, ವಿದ್ಯಾರ್ಥಿಗಳು ಸನ್ಯಾಸ ಸ್ವೀಕರಿಸಿಲ್ಲವಲ್ಲ!).

ಇಷ್ಟೇ ಅಲ್ಲದೆ, ಕೇಸರಿ, ಹಸಿರು, ಹಳದಿ- ಕೆಂಪು ಶಾಲುಗಳು ರಾಜಕೀಯ ಹಿತಾಸಕ್ತಿ ಮತ್ತು ಉದ್ದೇಶಗಳ ಕಾರಣಕ್ಕೆ ಬಳಕೆಗೆ ಬಂದವು ಎಂಬುದು ಸರ್ವವಿಧಿತ. ಆದ್ದರಿಂದ, ಈ ಕುರಿತು ಕಾಲೇಜಿನ ಆಡಳಿತ ಮಂಡಳಿಯು ವಿದ್ಯಾರ್ಥಿಗಳು ಮತ್ತು ಅವರ ಪೋಷಕರಿಗೆ ತಿಳಿಹೇಳಿ, ಮಕ್ಕಳು ರಾಜಕೀಯ ಹಿತಾಸಕ್ತಿಯ ದಾಳವಾಗುವುದನ್ನು ತಪ್ಪಿಸಬೇಕಾದ ಅವಶ್ಯಕತೆಯಿದೆ. 

- ಭಾರ್ಗವ ರಾಮ, ಕೊಪ್ಪ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು