ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲಾರಂಭಕ್ಕೆ ಆತುರ ಸಲ್ಲದು

Last Updated 29 ಆಗಸ್ಟ್ 2021, 19:45 IST
ಅಕ್ಷರ ಗಾತ್ರ

ಕೊರೊನಾ ಸೋಂಕಿನ ಕರಿನೆರಳಿನಿಂದ ಜನ ಇನ್ನೂ ಹೊರಬಾರದ ಕಠಿಣ ಸನ್ನಿವೇಶದಲ್ಲಿ ಸರ್ಕಾರ ಒಂದನೇ ತರಗತಿಯಿಂದ ಶಾಲಾರಂಭಕ್ಕೆ ಚಿಂತನೆ ನಡೆಸುತ್ತಿರುವುದು ಪೋಷಕರಲ್ಲಿ ಆತಂಕವನ್ನು ಉಂಟುಮಾಡಿದೆ. ನೆರೆರಾಜ್ಯ ಕೇರಳದಲ್ಲಿ ಈ ಸೋಂಕಿನ ಪ್ರಕರಣಗಳು ಇನ್ನೂ ಹೆಚ್ಚಿಗೆ ವರದಿಯಾಗುತ್ತಿವೆ. ಮಕ್ಕಳು ಅಂತರಕಾಯ್ದುಕೊಳ್ಳುವಂತೆ, ಮಾಸ್ಕ್‌ ಧರಿಸುವಂತೆ, ಆಗಾಗ ಕೈ ತೊಳೆಯುವಂತೆ ಮಾಡುವುದು ಕಷ್ಟಸಾಧ್ಯದ ಮಾತು. ಸಂಭಾವ್ಯ ಮೂರನೇ ಅಲೆಯನ್ನು ಎದುರಿಸಲು ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಸರ್ಕಾರ ಹೇಳಿದರೂ, ಎರಡನೇ ಅಲೆ ಸಂದರ್ಭದಲ್ಲಿ ಆಗಿರುವ ಕಹಿ ಅನುಭವದ ಹಿನ್ನೆಲೆಯಲ್ಲಿ ಪೋಷಕರಲ್ಲಿ ಅಳುಕು ಇದ್ದೇ ಇದೆ.

ಈಗಷ್ಟೇ ಪ್ರೌಢ ಮತ್ತು ಕಾಲೇಜು ಶಿಕ್ಷಣ ಪ್ರಾರಂಭವಾಗಿದ್ದು, ಮುಂದಿನ ಸ್ಥಿತಿಯನ್ನು ಕಾದು ನೋಡಬೇಕಾಗಿದೆ. ಪ್ರಾಥಮಿಕ ಹಂತದ ಶಾಲೆ ತೆರೆಯುವುದನ್ನು ಇನ್ನಷ್ಟು ದಿನ ಮುಂದೂಡುವುದು ಎಲ್ಲರ ಹಿತದೃಷ್ಟಿಯಿಂದ ಒಳ್ಳೆಯದು.

-ಗಣೇಶ ಆರ್‌., ಹಾಸನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT