ಮಂಗಳವಾರ, ಆಗಸ್ಟ್ 20, 2019
27 °C

ಮೆರಿಟ್‌ ಆಧರಿಸಿ ಸೀಟು: ಸ್ವಾಗತಾರ್ಹ ನಿರ್ಧಾರ

Published:
Updated:

ಸಮಾಜ ಕಲ್ಯಾಣ ಇಲಾಖೆ ನಿರ್ವಹಿಸುತ್ತಿರುವ ಪರಿಶಿಷ್ಟ ಜಾತಿಯ ಮೆಟ್ರಿಕ್‌ ನಂತರದ ವಿದ್ಯಾರ್ಥಿ ನಿಲಯಗಳಲ್ಲಿ ಖಾಲಿ ಇರುವ ಸೀಟುಗಳನ್ನು ಮೆರಿಟ್‌ ಆಧಾರದಡಿ ಇತರ ವಿದ್ಯಾರ್ಥಿಗಳಿಂದ ಭರ್ತಿ ಮಾಡುವುದು (ಪ್ರ.ವಾ., ಜುಲೈ 16) ಸ್ವಾಗತಾರ್ಹ ನಿರ್ಧಾರ.

ಬಹುತೇಕ ಜಿಲ್ಲೆಗಳ ಮೆಟ್ರಿಕ್‌ ನಂತರದ ವಿದ್ಯಾರ್ಥಿ ನಿಲಯಗಳಲ್ಲಿ ಸೀಟುಗಳು ಖಾಲಿ ಇರುತ್ತವೆ. ಮೆರಿಟ್‌ ಆಧಾರದಲ್ಲಿ ಸೀಟು ನೀಡುವುದರಿಂದ ಮೆರಿಟ್‌ ಪಡೆದು ಶೈಕ್ಷಣಿಕವಾಗಿ ಮುಂದುವರಿಯಲು ಸಾಧ್ಯವಾಗದ ಹಾಗೂ ಆರ್ಥಿಕವಾಗಿ ಹಿಂದುಳಿದ ಅನೇಕ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಗ್ರಾಮೀಣ ಪ್ರದೇಶದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೂ ನೆರವಾಗಲಿದೆ.

– ಎ.ಎಂ.ನಾಗಮಲ್ಲಪ್ಪ, ಚಾಮರಾಜನಗರ

Post Comments (+)