ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ | ಒತ್ತಡರಹಿತ ಮೌಲ್ಯಮಾಪನಕ್ಕೆ ಅವಕಾಶವಿರಲಿ

ಅಕ್ಷರ ಗಾತ್ರ

ದ್ವಿತೀಯ ಪಿಯು ಪರೀಕ್ಷೆಯ ಉತ್ತರಪತ್ರಿಕೆಗಳ ಮೌಲ್ಯಮಾಪನ ಮೇ 24ರಿಂದ ನಡೆಯಲಿದ್ದು, ಮೌಲ್ಯಮಾಪಕರು ದಿನಕ್ಕೆ 24 ಉತ್ತರಪತ್ರಿಕೆಗಳ ಮೌಲ್ಯಮಾಪನ ಮಾಡುವಂತೆ ಪದವಿ ಪೂರ್ವ ಶಿಕ್ಷಣ ಇಲಾಖೆ ಸೂಚಿಸಿದೆ (ಪ್ರ.ವಾ., ಮೇ 19). ಮೌಲ್ಯಮಾಪನ ಕಾರ್ಯ ದೋಷಮುಕ್ತವಲ್ಲ ಎಂಬುದನ್ನು ಹಿಂದಿನ ಅನುಭವಗಳು ಸಾರಿ ಹೇಳುತ್ತವೆ. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನಿರೀಕ್ಷಿತ ಅಂಕಗಳು ಬಾರದಿರುವಂತೆಯೇ, ಸಾಧಾರಣ ಮಟ್ಟದ ವಿದ್ಯಾರ್ಥಿಗಳಿಗೆ ಅವರ ನಿರೀಕ್ಷೆಗೆ ಮೀರಿ ಅಂಕಗಳು ಬಂದಿರುವ ಬಹಳಷ್ಟು ಉದಾಹರಣೆಗಳಿವೆ. ಹಾಗೆಯೇ ಅಂಕಗಳನ್ನು ಕೂಡಿಸು ವುದರಲ್ಲಿ (ಟೋಟಲ್) ತಪ್ಪುಗಳಾಗಿರುವುದು ವಿದ್ಯಾರ್ಥಿಗಳು ಮರುಕೂಡಿಸುವಂತೆ (ರೀಟೋಟಲ್) ಅರ್ಜಿ ಹಾಕಿದಾಗ ಬಯಲಾಗುತ್ತದೆ.

ಈ ತಪ್ಪುಗಳಿಗೆ ಮೂಲ ಕಾರಣ ಮೌಲ್ಯಮಾಪಕರ ಮೇಲೆ ಅನಗತ್ಯವಾಗಿ ಹೇರುವ ಒತ್ತಡ. ಮೌಲ್ಯಮಾಪಕರು ಒತ್ತಡರಹಿತರಾಗಿದ್ದಲ್ಲಿ ಉತ್ತರಪತ್ರಿಕೆಯ ಮೌಲ್ಯ ನಿರ್ಧಾರ ಸಮರ್ಪಕವಾಗಿರುತ್ತದೆ ಮತ್ತು ಅಂಕಗಳ ಕೂಡಿಸುವಿಕೆ ಯಲ್ಲೂ ತಪ್ಪುಗಳನ್ನು ನಿವಾರಿಸಬಹುದು. ಮೌಲ್ಯಮಾಪಕರು ತಾವು ಎತ್ತಿಕೊಂಡ ಪ್ರತಿಯೊಂದು ಉತ್ತರಪತ್ರಿಕೆಯನ್ನೂ ಸಾಕ್ಷಾತ್ ವಿದ್ಯಾರ್ಥಿಗಳೇ ತಮ್ಮ ಮುಂದಿದ್ದಾರೆ ಎಂದು ಪರಿಭಾವಿಸಿ ಮೌಲ್ಯಮಾಪನ ಮಾಡಬೇಕಾಗುತ್ತದೆ. ಆದ್ದರಿಂದ ಮೌಲ್ಯಮಾಪಕರಿಗೆ ಯಾವುದೇ ಒತ್ತಡ ಇಲ್ಲದ ವಾತಾವರಣವನ್ನು ಇಲಾಖೆ ಕಲ್ಪಿಸಬೇಕಿದೆ.

–ಸಿ.ಚಿಕ್ಕತಿಮ್ಮಯ್ಯ ಹಂದನಕೆರೆ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT