ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶಸ್ತಿಗೆ ವಯಸ್ಸು ನಿಗದಿ: ಹಾಸ್ಯಾಸ್ಪದ ಮಾನದಂಡ

Last Updated 27 ಸೆಪ್ಟೆಂಬರ್ 2021, 19:30 IST
ಅಕ್ಷರ ಗಾತ್ರ

ರಾಜ್ಯೋತ್ಸವ ಪ್ರಶಸ್ತಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ, ಸಾರ್ವಜನಿಕರ ಶಿಫಾರಸಿಗೆ ಅವಕಾಶ ಒದಗಿಸಿಕೊಟ್ಟಿರುವುದು ಉತ್ತಮ ನಿರ್ಧಾರ. ಆದರೆ, ಕ್ರೀಡೆ ಹೊರತುಪಡಿಸಿ ಉಳಿದ ಸಾಧಕರಿಗೆ ಕನಿಷ್ಠ 60 ವರ್ಷವಾಗಿರಬೇಕು ಎಂದು ವಿಯೋಮಿತಿ ನಿಗದಿ ಮಾಡಿರುವುದು ಮಾತ್ರ ಹಾಸ್ಯಾಸ್ಪದವಾಗಿ ಕಾಣುತ್ತದೆ. 25-30 ವರ್ಷ ವಯಸ್ಸು ಪ್ರಧಾನಿ ಆಗಲು, 35 ವರ್ಷ ರಾಷ್ಟ್ರಪತಿ ಆಗಲು ಇರುವಾಗ, ಅತ್ಯುತ್ತಮ ಸಾಧನೆ ಮಾಡಿದವರನ್ನು ಆಯ್ಕೆ ಮಾಡಿ ಗೌರವಿಸಲು ವಯಸ್ಸನ್ನು ಮಾನದಂಡ ಮಾಡಿರುವುದು ಸರಿಕಾಣದು.

ಅರ್ಹತೆಗೆ ವಿವಿಧ ಕ್ಷೇತ್ರಗಳಲ್ಲಿನ ಸಾಧನೆ ಮತ್ತು ಸೇವೆಗಳಷ್ಟೇ ಮಾನದಂಡವಾಗಲಿ. 32 ವರ್ಷ ಆಯಸ್ಸಿನ ಶಂಕರಾಚಾರ್ಯರು, 39 ವರ್ಷ ಮಾತ್ರ ಬದುಕಿದ್ದ ಸ್ವಾಮಿ ವಿವೇಕಾನಂದರ ಸಾಧನೆ ಮರೆಯಲಾದೀತೇ? ಆದ್ದರಿಂದ ವಯಸ್ಸಿನ ಮಾನದಂಡ ಕೈಬಿಡಲಿ.

– ಚಂದ್ರಶೇಖರ ಪುಟ್ಟಪ್ಪ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT