ರಾಜ್ಯದಲ್ಲಿ ತೀವ್ರ ಬರ: ನಾಯಕರಿಗೆ ಚುನಾವಣೆಯದ್ದೇ ಚಿಂತೆ!

7

ರಾಜ್ಯದಲ್ಲಿ ತೀವ್ರ ಬರ: ನಾಯಕರಿಗೆ ಚುನಾವಣೆಯದ್ದೇ ಚಿಂತೆ!

Published:
Updated:

ರಾಜ್ಯ ತೀವ್ರ ಬರವನ್ನು ಎದುರಿಸುತ್ತಿದ್ದರೂ ನಮ್ಮ ಸರ್ಕಾರವು ಚುನಾವಣಾ ಮೈತ್ರಿ, ಒಳ ಒಪ್ಪಂದ, ಖಾತೆ ಹಂಚಿಕೆ, ಜಯಂತಿ ಆಚರಣೆ, ಮುಂದಿನ ವರ್ಷ ನಡೆಯಲಿರುವ ಲೋಕ ಸಭಾ ಚುನಾವಣೆಯ ಮಹಾ ಘಟಬಂಧನ... ಎಂಬೆಲ್ಲ ವಿಷಯಗಳ ಬಗ್ಗೆ ತಲೆ ಕೆಡಿಸಿಕೊಂಡಿದೆಯೇ ಹೊರತು, ನಾಡಿನ ಅಭಿವೃದ್ಧಿಯ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಆದ್ದರಿಂದ ಹೊಸ ಸರ್ಕಾರದಿಂದ ಹೊಸದನ್ನು ನಿರೀಕ್ಷಿಸುತ್ತಿರುವವರಿಗೆ ಭ್ರಮ ನಿರಸನವಾಗುವುದರಲ್ಲಿ ಸಂಶಯವಿಲ್ಲ.

ಸರ್ಕಾರ ಇನ್ನಾದರೂ ಚುನಾವಣೆಯನ್ನು ಗುರಿಯಾಗಿಟ್ಟ ಚಿಂತನೆ, ಕಾರ್ಯಕ್ರಮಗಳನ್ನು ಸ್ವಲ್ಪ ಹಿಂದಕ್ಕೆ ಸರಿಸಿ, ರಾಜ್ಯದ ಜ್ವಲಂತ ಸಮಸ್ಯೆಗಳತ್ತ ಗಮನಹರಿಸಲಿ. ಹಾಗಾಗದಿದ್ದಲ್ಲಿ ಮೈತ್ರಿ ಸರ್ಕಾರಕ್ಕೆ ಅನುವು ಮಾಡಿಕೊಟ್ಟ ರಾಜ್ಯದ ಜನತೆ ಮುಂದಿನ ದಿನಗಳಲ್ಲಿ ಸರ್ಕಾರಕ್ಕೆ ಪಾಠ ಕಲಿಸಲು ಮುಂದಾಗುತ್ತಾರೆ ಎಂಬುದು ಖಚಿತ.

–ಕಡೂರು ಫಣಿಶಂಕರ್, ಬೆಂಗಳೂರು

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !