ಇದ್ಹೇಗೆ ಸಾಧ್ಯ?

7
ನೆರಳು

ಇದ್ಹೇಗೆ ಸಾಧ್ಯ?

Published:
Updated:
ಸಾಂದರ್ಭಿಕ ಚಿತ್ರ

ಕರ್ನಾಟಕ ಸರ್ಕಾರದ ಗ್ರಂಥಾಲಯ ಇಲಾಖೆಯು ಆಯಾ ವರ್ಷದಲ್ಲಿ ಪ್ರಕಟವಾದ ಕನ್ನಡ ಹಾಗೂ ಇತರ ಭಾಷಾ ಕೃತಿಗಳನ್ನು ಇಲಾಖೆಯ ಆಯ್ಕೆ ಸಮಿತಿಗೆ ಕಳುಹಿಸಿಕೊಡುವಂತೆ ಪ್ರತಿವರ್ಷ ಲೇಖಕರು ಮತ್ತು ಪ್ರಕಾಶಕರನ್ನು ಕೋರುತ್ತದೆ. ಅದಕ್ಕೆ ನೋಂದಣಿ ಮಾಡಿಸಬೇಕು. ಆಯ್ಕೆಯಾದ ಕೃತಿಗಳನ್ನು ಇಲಾಖೆಗೆ ಸರಬರಾಜು ಮಾಡುವಂತೆ ಲೇಖಕ– ಪ್ರಕಾಶಕರಿಗೆ ಸೂಚಿಸುತ್ತದೆ. ಇದು ಯಾವತ್ತೂ ನಡೆದಿರುವ ವಿಧಿವಿಧಾನ.

ಆದರೆ ಈಗ ಎರಡು ವರ್ಷಗಳಲ್ಲಿ ಅಂದರೆ 2014, 2015ನೇ ಸಾಲಿನ ಕೃತಿಗಳನ್ನು 2016ರಲ್ಲಿ ಒಮ್ಮೆಗೇ ಖರೀದಿಸಲಾಯಿತು. ಹೀಗೇ 2016 ಮತ್ತು 2017ರ ಸಾಲಿನ ಕೃತಿಗಳ ಆಯ್ಕೆ ಪಟ್ಟಿ 2018ರ ಅಂತ್ಯಕ್ಕೆ ಸಿದ್ಧವಾಗಬಹುದು. ಆದರೆ 2017ರಲ್ಲಿ ಪ್ರಥಮ ಆವೃತ್ತಿಯಾಗಿ ಮುದ್ರಣಗೊಂಡ ಕೆಲವು ಕೃತಿಗಳು ಜಿಲ್ಲಾ ಗ್ರಂಥಾಲಯಗಳಲ್ಲಿ  ಓದುಗರಿಗೆ ಲಭ್ಯ ಇವೆ! ಇದ್ಹೇಗೆ ಸಾಧ್ಯ?

ಆಯ್ಕೆ ಪಟ್ಟಿಯಲ್ಲಿ ಇಲ್ಲದ (2017ರ) ಕೃತಿಗಳನ್ನು ಜಿಲ್ಲಾ ಕೇಂದ್ರ ಮತ್ತು ನಗರ ಗ್ರಂಥಾಲಯಾಧಿಕಾರಿಗಳು ಖರೀದಿಸಲು ಅವಕಾಶ ಇರುವುದಿಲ್ಲ. ಹೀಗಿರುವಲ್ಲಿ ಇಂತಹ ಕೃತಿಗಳು  ಅಪಮಾರ್ಗದಲ್ಲೇನಾದರೂ
ಗ್ರಂಥಾಲಯಗಳಿಗೆ ಸರಬರಾಜು ಆಗಿರಬಹುದೇ?

ಯೋಗಿತಾ, ದಾವಣಗೆರೆ

Tags: 

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !