‘ಮನಿ ಟೂ’ ಅಭಿಯಾನ ಆರಂಭವಾಗಲಿ

7

‘ಮನಿ ಟೂ’ ಅಭಿಯಾನ ಆರಂಭವಾಗಲಿ

Published:
Updated:

‘ನಮ್ಮ ದೇಶದ ಶೇ 92ರಷ್ಟು ಜನ ಒಂದಿಲ್ಲೊಂದು ರೀತಿ ಭ್ರಷ್ಟಾಚಾರದ ಕಹಿ ಅನುಭವಗಳನ್ನು ಹೊಂದಿದ್ದಾರೆ ಮತ್ತು ಅದರಲ್ಲಿ ಶೇ 50ರಷ್ಟು ಜನ ಸರ್ಕಾರಿ ಕಚೇರಿಗಳಲ್ಲಿ ತಾವು ಲಂಚ ನೀಡಿದ್ದೇವೆ ಎಂದು ಹೇಳಿದ್ದಾರೆ’ ಎಂದು ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಷನಲ್ ಸಂಸ್ಥೆಯ ವರದಿಯೊಂದು ಹೇಳಿದೆ. ಇದೇ ಸಂಸ್ಥೆ ಕಳೆದ ವರ್ಷ ಬಿಡುಗಡೆ ಮಾಡಿದ ಭ್ರಷ್ಟಾಚಾರ ಗ್ರಹಿಕೆ ಸೂಚ್ಯಂಕದಲ್ಲಿ ಭಾರತವು ವಿಶ್ವದ 180 ದೇಶಗಳ ಪೈಕಿ 81ನೇ ಸ್ಥಾನ ಪಡೆದಿದೆ. ಅಂದರೆ, ನಮ್ಮ ದೇಶದ ಭ್ರಷ್ಟ ವ್ಯವಸ್ಥೆಯ ಕರಾಳತೆಯನ್ನು ಇದು ಸ್ಪಷ್ಟಪಡಿಸುತ್ತಿದೆ.

ಈ ವ್ಯವಸ್ಥೆಯ ವಿರುದ್ಧ ಒಬ್ಬ ವ್ಯಕ್ತಿ ಅಥವಾ ಒಂದು ಗುಂಪು ಹೋರಾಡಿದರೆ ಸಾಲದು. ಇದರ ವಿರುದ್ಧ ಜನಾಂದೋಲನವೇ ರೂಪುಗೊಳ್ಳಬೇಕಾಗಿದೆ. ದೇಶದಲ್ಲಿ ಭ್ರಷ್ಟಾಚಾರದ ಕಹಿ ಅನುಭವವನ್ನು ಹೊಂದಿರುವವರು ತಮ್ಮ ಅನುಭವಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮೂಲಕ ‘ಮನಿ ಟೂ’ (money too) ಅಭಿಯಾನ ಆರಂಭಿಸಬೇಕು. ಈ ವೇದಿಕೆಯ ಮೂಲಕ ಭ್ರಷ್ಟ ರಾಜಕಾರಣಿಗಳ ಮತ್ತು ಅಧಿಕಾರಿಗಳ ನೈಜ ಮುಖವಾ
ಡವನ್ನು ಕಳಚುವ ಪ್ರಯತ್ನ ಮಾಡಬೇಕಿದೆ. ಈ ಮೂಲಕ ವ್ಯವಸ್ಥೆಯಲ್ಲಿ ಸಣ್ಣದಾದರೂ ಬದಲಾವಣೆ ತರುವ ಪ್ರಯತ್ನ ಮಾಡಬಹುದು.

ಹನಮಂತ ಕೊಪ್ಪದ, ಮೈಸೂರು

Tags: 

ಬರಹ ಇಷ್ಟವಾಯಿತೆ?

 • 8

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !