‘ಸಿದ್ಧಾರ್ಥ ಅಂಧರ ಕೇಂದ್ರ’: ಪ್ರೇರಣೆ ನೀಡುವ ಎಲೆಮರೆ ಕಾಯಿಗಳು

ಸೋಮವಾರ, ಏಪ್ರಿಲ್ 22, 2019
29 °C

‘ಸಿದ್ಧಾರ್ಥ ಅಂಧರ ಕೇಂದ್ರ’: ಪ್ರೇರಣೆ ನೀಡುವ ಎಲೆಮರೆ ಕಾಯಿಗಳು

Published:
Updated:

ಅಂಧರು, ಅಂಗವಿಕಲರಿಗಾಗಿ ಸರ್ಕಾರ ಅನೇಕ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದೆ. ಆದರೂ ಅವರ ಕಲ್ಯಾಣ ಸಾಧಿಸಲು ಈ ಯೋಜನೆಗಳು ನಿರೀಕ್ಷಿತ ಮಟ್ಟದಲ್ಲಿ ಯಶಸ್ವಿಯಾಗಿಲ್ಲ. ಇಂತಹ ಸ್ಥಿತಿಯಲ್ಲಿ, ಭದ್ರಾವತಿಯ ಶಾರದಾ ಮತ್ತು ಶಿವಬಸಪ್ಪ ದಂಪತಿ 1998ರಲ್ಲಿ ‘ಸಿದ್ಧಾರ್ಥ ಅಂಧರ ಕೇಂದ್ರ’ ತೆರೆದು ಅಂಧರ ಬಾಳಿಗೆ ಬೆಳಕಾಗಿರುವುದನ್ನು ಓದಿ (ಪ್ರ.ವಾ., ಮಾರ್ಚ್‌ 21) ಮನಸ್ಸು ತುಂಬಿ ಬಂತು. ಇಂಥ ಅನೇಕ ಜನ ಎಲೆಮರೆ ಕಾಯಿಯಂತೆ ತಮ್ಮ ಪಾಡಿಗೆ ತಾವು ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅಂತಹವರ ಸಮಾಜಮುಖಿ ಸೇವೆಗಳನ್ನು ಗುರುತಿಸಿ ಗೌರವಿಸುವ ಕೆಲಸ ನಡೆದರೆ, ಅದರಿಂದ ಬಹುತೇಕರಿಗೆ ಪ್ರೇರಣೆ ದೊರೆಯುತ್ತದೆ. 

ಸಿ.ಚಿಕ್ಕತಿಮ್ಮಯ್ಯ ಹಂದನಕೆರೆ, ಬೆಂಗಳೂರು

Tags: 

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !