ಸಣ್ಣ ಉದ್ಯಮ: ದೊಡ್ಡ ಬಲ

7

ಸಣ್ಣ ಉದ್ಯಮ: ದೊಡ್ಡ ಬಲ

Published:
Updated:

ಇಪ್ಪತ್ತು ವರ್ಷಗಳ ಹಿಂದಿನವರೆಗೂ ನಮ್ಮ ಪರಿಸರ ಪ್ರದೇಶದಲ್ಲಿ ಸಾಮಾನ್ಯವಾಗಿ ಹಾಳು ಮಣ್ಣು, ಕಲ್ಲು, ಚೀಪಕಲ್ಲುಗಳನ್ನು (ಕಲ್ಲಿನ ಸಣ್ಣ ತುಣುಕು) ಉಪಯೋಗಿಸಿ ಮನೆಯ ಗೋಡೆಗಳನ್ನು ನಿರ್ಮಿಸುತ್ತಿದ್ದರು. ಇಂಥ ಗೋಡೆಗಳು ಬಿಗಿಯಾಗಲು ಈ ಸಣ್ಣ ಚೀಪಕಲ್ಲು ಬೇಕೇ ಬೇಕಿತ್ತು. ಬಹುತೇಕ ಕಲ್ಲಿನ ಗೋಡೆಗಳಿಗೆ ಈ ಚೀಪಕಲ್ಲುಗಳು ಶಕ್ತಿ ಹಾಗೂ ಭದ್ರತೆ.

ಚೀಪಕಲ್ಲು ಚಿಕ್ಕದಿದ್ದರೂ ಗೋಡೆ ಭದ್ರತೆಗೆ ಎಷ್ಟು ಅವಶ್ಯವೋ ದೇಶದ ಆರ್ಥಿಕ ವೃದ್ಧಿಗೆ ಸಣ್ಣ ಸಣ್ಣ ವಸ್ತುಗಳನ್ನು ತಯಾರಿಸುವ ಉದ್ಯಮಗಳೂ ಅಷ್ಟೇ ಅಗತ್ಯ. ಆಟಿಕೆ,  ಟಾರ್ಚು, ಮೊಬೈಲ್ ಮತ್ತು ದಿನನಿತ್ಯ ಉಪಯೋಗಿಸುವ ಚಿಕ್ಕ ಪುಟ್ಟ ವಸ್ತುಗಳನ್ನು ತಯಾರಿಸುವ ಉದ್ಯಮಗಳು, ಪೂರಕ ಘಟಕಗಳು ನಮ್ಮಲ್ಲೇ ನೆಲೆಗೊಳ್ಳಬೇಕು. ಆರ್ಥಿಕ ವೃದ್ಧಿಗೆ ಇವು ಬಲ ನೀಡುತ್ತವೆ.

ಚೀನೀಯರು ಕುಶಾಗ್ರಮತಿಗಳಲ್ಲದೆ ಕುಶಲಕರ್ಮಿ
ಗಳು. ನಾವು ಬಿಸಾಡುವ ಪ್ಲಾಸ್ಟಿಕ್, ಲೋಹ ಉಪಯೋಗಿಸಿ ಆಕರ್ಷಕ ಡಿಸೈನ್‌, ಬಣ್ಣಗಳಿಂದ ಯಾವುದೋ ದಿನಬಳಕೆ ವಸ್ತು ತಯಾರಿಸಿ, ಕಡಿಮೆ ಬೆಲೆ ನಮೂದಿಸಿ ಅವುಗಳ ಆಕರ್ಷಣೆಗೆ ಒಳಗಾಗುವಂತೆ ಮಾಡುತ್ತಾರೆ. ಇಂತಹ
ವುಗಳ ರಫ್ತಿನಿಂದ ಚೀನಾಗೆ ಲಾಭ ಮಾತ್ರವಲ್ಲದೆ ತ್ಯಾಜ್ಯದ ಸಮಸ್ಯೆಯೂ ನಿವಾರಣೆಯಾಗುತ್ತದೆ. ಅದಕ್ಕಾಗಿಯೇ ಚೀನಾ ಇಂದು ಬಲಿಷ್ಠ ಆರ್ಥಿಕ ಶಕ್ತಿಯಾಗಿದೆ.

ಮುಖ್ಯಮಂತ್ರಿ ಕುಮಾರಸ್ವಾಮಿ ಈ ನಿಟ್ಟಿನಲ್ಲಿ ಆಯವ್ಯಯದಲ್ಲಿ ಆದ್ಯತೆ ನೀಡಿರುವುದು ಸಕಾಲಿಕ. ಅದರ ತ್ವರಿತ ಅನುಷ್ಠಾನ ಸಾಧ್ಯವಾದರೆ ಉದ್ಯೋಗ ಸೃಷ್ಟಿಗೆ ಪೂರಕ.

ಬಸವರಾಜ ಜಿ. ಸೊನ್ನದ, ಇಂಗಳೇಶ್ವರ

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !