7

ಹಾವಿನ ಬುಟ್ಟಿ!

Published:
Updated:

‘ನನ್ನ ಬಳಿಯೂ ಅನೇಕ ಡೈರಿಗಳಿವೆ. ಸಮಯ ಬಂದಾಗ ಬಹಿರಂಗಪಡಿಸಬೇಕಾಗುತ್ತದೆ’ ಎಂದು ಡಿ.ಕೆ. ಶಿವಕುಮಾರ್‌ ಹೇಳಿರುವುದು ವರದಿಯಾಗಿದೆ (ಪ್ರ.ವಾ., ಜೂನ್ 21).

ತಪ್ಪೆಸಗಿರುವವರ ಬಗ್ಗೆ ಮಾಹಿತಿ ಇದ್ದೂ ಅದನ್ನು ಬಚ್ಚಿಡುವುದೆಂದರೆ, ತಪ್ಪಿತಸ್ಥರಿಗೆ ರಕ್ಷಣೆ ನೀಡಿದಂತೆಯೇ ಅಲ್ಲವೇ? ಅದೂ ಅಪರಾಧವಲ್ಲವೇ? ಇಂತಹ ಅಪರಾಧ ಮಾಡಿದವರ ವಿರುದ್ಧ ನ್ಯಾಯಾಲಯ ಸ್ವಯಂಪ್ರೇರಿತವಾಗಿ ಮೊಕದ್ದಮೆ ದಾಖಲಿಸಿ ಕ್ರಮ ಕೈಗೊಳ್ಳಬೇಕಲ್ಲವೇ? ಇಂತಹ ಹಲವು ಪ್ರಶ್ನೆಗಳಿಗೆ ಉತ್ತರಿಸುವವರಾರು?

ಡಿ.ಕೆ. ಶಿವಕುಮಾರ್ ಒಂದು ಉದಾಹರಣೆ ಅಷ್ಟೇ. ‘ನನ್ನ ಬುಟ್ಟಿಯಲ್ಲೂ ಹಾವಿದೆ’ ಎಂದು ಅನೇಕ ಧುರೀಣರು ಆಗಾಗ ಹೇಳುತ್ತಲೇ ಇರುತ್ತಾರೆ. ಇಂತಹ ಅಸಂಬದ್ಧ ಹೇಳಿಕೆಗಳಿಗೆ ಕಡಿವಾಣ ಹಾಕಬೇಕಿದೆ.

-ಪತ್ತಂಗಿ ಎಸ್. ಮುರಳಿ, ಬೆಂಗಳೂರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !