ಸಮಾನ ನೀತಿ ಬೇಕು

7

ಸಮಾನ ನೀತಿ ಬೇಕು

Published:
Updated:

102 ವರ್ಷದ ಛಲಗಾತಿ ಅಜ್ಜಿ ಮನ್‌ ಕೌರ್‌, ಸ್ಪೇನ್ ದೇಶದಲ್ಲಿ ನಡೆದ ಹಿರಿಯರ ಕ್ರೀಡಾಕೂಟದಲ್ಲಿ, 200 ಮೀಟರ್‌ ಓಟದ ಸ್ಪರ್ಧೆಯಲ್ಲಿ ಚಿನ್ನದ ಪದಕದ ಸಾಧನೆ ಮಾಡಿದ್ದನ್ನು ಓದಿ (ಪ್ರ.ವಾ., ಸೆ. 24) ಭೇಷ್ ಎನಿಸಿದರೂ ಅವರಿಗೆ ರಾಷ್ಟ್ರದಿಂದ ದೊರೆತದ್ದು ದೊಡ್ಡ ಸೊನ್ನೆ ಎಂದು ತಿಳಿದು ಬೇಸರವೆನಿಸಿತು.

ಒಪ್ಪೊತ್ತಿನ ಊಟಕ್ಕೂ ಇಲ್ಲದ ಅದೆಷ್ಟೋ ಕ್ರೀಡಾಪಟುಗಳು ಸಾಲ– ಸೋಲ ಮಾಡಿ ಅಂತರರಾಷ್ಟ್ರೀಯ ಮಟ್ಟದ 
ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಸಾಧನೆ ಮಾಡುತ್ತಿದ್ದಾರೆ. ಪ್ರಯಾಣದ ವೆಚ್ಚ, ವಸತಿ, ಊಟಗಳ ಖರ್ಚುವೆಚ್ಚ ಮಾತ್ರವಲ್ಲ ಕ್ರೀಡಾಕೂಟದ ಪ್ರವೇಶ ಶುಲ್ಕವನ್ನೂ ಇಂಥ ಕ್ರೀಡಾಪಟುಗಳೇ ಭರಿಸಬೇಕಾಗಿದೆ. ಇಂಥವರು ಮಾಡುವ ಸಾಧನೆಗಳು ರಾಷ್ಟ್ರಕ್ಕೆ ಗೌರವ ತರುವಂಥವುಗಳಲ್ಲವೇ?

ಕ್ರೀಡಾ ಸಚಿವರು ಇತ್ತ ಗಮನ ಹರಿಸಿ ಎಲ್ಲ ಕ್ರೀಡೆಗಳಿಗೂ ಒಂದೇ ರೀತಿಯ ನೀತಿಯನ್ನು ರೂಪಿಸಿ, ಹಿರಿಯ ಕ್ರೀಡಾಪಟುಗಳನ್ನು ಗೌರವಿಸಬೇಕು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !