ಸಾಮಾನ್ಯ ವಿವೇಕಕ್ಕೆ ಕಪ್ಪು ಚುಕ್ಕೆ ಈ ವಿವಾದ!

7

ಸಾಮಾನ್ಯ ವಿವೇಕಕ್ಕೆ ಕಪ್ಪು ಚುಕ್ಕೆ ಈ ವಿವಾದ!

Published:
Updated:

‘ಡಿಸಿಎಂ ಸೇವಿಸುವ ಆಹಾರ ಪರೀಕ್ಷೆಗೆ ಸ್ವಾಮೀಜಿ ಆಕ್ಷೇಪ’ (ಪ್ರ.ವಾ., ನ. 6) ಎಂಬ ಸುದ್ದಿಯು ಜನರಲ್ಲಿ ಉ‍ಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಅವರ ನಡವಳಿಕೆಯ ಬಗ್ಗೆ ತಪ್ಪು ಗ್ರಹಿಕೆ ಮೂಡಿಸಲು ಎಡೆಮಾಡಿಕೊಡುವಂತಿದೆ.

ಸಾಣೇಹಳ್ಳಿಯ ರಾಷ್ಟ್ರೀಯ ನಾಟಕೋತ್ಸವದ ಉದ್ಘಾಟನೆಗೆ ಉಪಮುಖ್ಯಮಂತ್ರಿ ಹೋದದ್ದೇ, ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಗೆ ಜಾತ್ಯತೀತ ಮತ್ತು ಪ್ರಜಾಪ್ರಭುತ್ವವಾದಿ ಮೌಲ್ಯಗಳಲ್ಲಿರುವ ಗಾಢ ನಂಬಿಕೆಯ ಬಗೆಗಿನ ಗೌರವದ ಕಾರಣಕ್ಕಾಗಿ. ಎಲ್ಲಾ ಗಣ್ಯ ವ್ಯಕ್ತಿಗಳು ಸೇವಿಸುವ ಆಹಾರವನ್ನು ಪರೀಕ್ಷೆ ಮಾಡುವುದು ದೇಶದ ನಿಯಮಾವಳಿಯಡಿ ಬರುವ ವಿಚಾರ– ಪದ್ಧತಿಯಾಗಿದೆ. ಹಾಗಾಗಿ ಮಠದಲ್ಲಿ ಪರಮೇಶ್ವರ ಅವರು ಆಹಾರ ಸೇವಿಸುವುದಕ್ಕೆ ಮುಂಚೆ ಸಹಜವೆಂಬಂತೆಯೇ ಪರೀಕ್ಷೆಯ ಪ್ರಕ್ರಿಯೆ ನಡೆದಿರಬಹುದೇ ವಿನಾ, ಅದಕ್ಕೆ ಬೇರಾವುದೋ ಒಳ ಉದ್ದೇಶ ಇರುವ ಸಾಧ್ಯತೆ ಇಲ್ಲ. ಇದನ್ನು ವಿವಾದ ಮಾಡುವುದು ಸರಿಯಲ್ಲ. ಸ್ವಾಮೀಜಿಯವರು ಸಾರ್ವಜನಿಕವಾಗಿ ಆವೇಶಗೊಂಡು ಮಾತನಾಡಿದ್ದು ಸರಿಯಲ್ಲ.

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !