ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯ ಅಭಿವೃದ್ಧಿ | ಆಡಳಿತಕ್ಕೆ ಯಡಿಯೂರಪ್ಪ ಅನುಭವ ನೆರವಾಗಲಿ

Last Updated 29 ಜುಲೈ 2019, 20:01 IST
ಅಕ್ಷರ ಗಾತ್ರ

ಯಾವ ಕಾರಣಗಳಿಂದ ಮೈತ್ರಿ ಸರ್ಕಾರ ಅಧಿಕಾರ ಕಳೆದುಕೊಂಡಿತೋ ಅದೇ ಸಮಸ್ಯೆಗಳ ಮೂಟೆಯು ಈಗ ಅಧಿಕಾರ ಹಿಡಿದಿರುವ ಬಿಜೆಪಿಯ ಎದುರು ಇದೆ. ರಾಜಕೀಯ ಅನುಭವದಿಂದ ಪಕ್ವಗೊಂಡಿರುವ ಬಿ.ಎಸ್.ಯಡಿಯೂರಪ್ಪ ಅವರು ಈ ಹಿಂದೆ ತಾವು ಮುಖ್ಯಮಂತ್ರಿಯಾಗಿದ್ದಾಗ ಆಗಿದ್ದ ಲೋಪದೋಷಗಳನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಮುನ್ನಡೆಯಬೇಕು. ಪದೇ ಪದೇ ಚುನಾವಣೆಗಳು ಯಾರಿಗೂ ಬೇಡವಾಗಿವೆ. ಇನ್ನುಳಿದಿರುವ ಅವಧಿಯಲ್ಲಾದರೂ ಸ್ಥಿರ ಸರ್ಕಾರವಿದ್ದರೆ ಸಾಕು ಎಂಬುದು ಬಹುತೇಕರ ಆಶಯ ಮತ್ತು ನಿರೀಕ್ಷೆ.

ಜಟಿಲ ಸಮಸ್ಯೆಗಳಿಗೆ ಪರಿಹಾರ ಹುಡುಕಿ, ಜನಸಾಮಾನ್ಯರಿಗೆ ಹಿತವೆನಿಸುವಂಥ ಸಾಮಾನ್ಯ ಕಾರ್ಯಕ್ರಮಗಳನ್ನು ರೂಪಿಸಿ ಶಾಸಕರೊಂದಿಗೆ, ವಿರೋಧ ಪಕ್ಷಗಳೊಂದಿಗೆ ಸಹಮತ ಹಾಗೂ ಸಮನ್ವಯದಿಂದ ಅವರು ಆಡಳಿತ ನಡೆಸಬೇಕು. ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷದ ಸರ್ಕಾರ ಇರುವುದರ ಪೂರ್ಣ ಪ್ರಯೋಜನ ಪಡೆದು, ರಾಜ್ಯದ ಎಲ್ಲ ಭಾಗಗಳನ್ನೂ ಅಭಿವೃದ್ಧಿಪಡಿಸಬೇಕು. ವಿರೋಧ ಪಕ್ಷಗಳು ವಿಷಯಾಧಾರಿತವಾಗಿಯಾದರೂ ಸಹಕಾರ ನೀಡಬೇಕು. ಆಡಳಿತದಲ್ಲಿ ಮೌಲ್ಯಾಧಾರಿತ ನಿರ್ಧಾರಗಳನ್ನು ತೆಗೆದುಕೊಂಡು ಜಾರಿಗೆ ತಂದರೆ, ಜನಸಾಮಾನ್ಯರ ಜೀವನಮಟ್ಟ ಸುಧಾರಣೆಯಾಗಿ, ರಾಜಕೀಯ ಪಕ್ಷಗಳ ಬಗ್ಗೆ ಅವರಲ್ಲಿ ಒಳ್ಳೆಯ ಅಭಿಪ್ರಾಯ ಮೂಡುತ್ತದೆ.

–ಉದಯ ಮ. ಯಂಡಿಗೇರಿ,ಧಾರವಾಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT