ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ | ಕತ್ತೆ ಸಾಕಣೆ: ಸ್ವ ಉದ್ಯೋಗಕ್ಕೆ ಶುಕ್ರದೆಸೆ?

Last Updated 9 ಜೂನ್ 2022, 19:31 IST
ಅಕ್ಷರ ಗಾತ್ರ

ರಾಜ್ಯದ ಮೊದಲ ಕತ್ತೆ ಸಾಕಾಣಿಕೆ ಕೇಂದ್ರವು ಬಂಟ್ವಾಳ ತಾಲ್ಲೂಕಿನಲ್ಲಿ ಆರಂಭವಾಗಿದೆ. ಕತ್ತೆಯು ಏನಿದ್ದರೂ ಗಂಟು ಮೂಟೆ ಹೊರಲಿಕ್ಕಷ್ಟೇ ಲಾಯಕ್ಕು ಎಂಬ ಭಾವನೆ ಜನರಲ್ಲಿದೆ. ಆದರೆ ಇದೀಗ ಅದರ ಹಾಲು ಬಹುಮುಖ್ಯವಾಗಿ ಮಧುಮೇಹ ನಿಯಂತ್ರಣ, ರೋಗನಿರೋಧಕ ಶಕ್ತಿ ಹೆಚ್ಚಿಸುವ ಗುಣ ಹಾಗೂ ವಿಶೇಷವಾಗಿ ಸೌಂದರ್ಯವರ್ಧಕವಾಗಿ ಬಳಕೆಯಾಗುತ್ತದೆ ಎಂಬ ವಿಷಯ ತಿಳಿದು ಸಖೇದಾಶ್ಚರ್ಯವಾಗಿದೆ. ಜತೆಗೆ ಕತ್ತೆ ಎನ್ನುವ ನಮ್ಮ ನಡುವಿನ ನಿರುಪದ್ರವಿ ಪ್ರಾಣಿಗೂ ಶುಕ್ರದೆಸೆ ಬಂದಿರುವುದು ಮತ್ತು ಅದರ ಹಾಲು ಹೈನು ಉದ್ಯಮದ ನಮ್ಮ ಹಾಲಿನ ದರಕ್ಕಿಂತ ಎಷ್ಟೋ ಪಟ್ಟು ಜಾಸ್ತಿ ಇರುವುದು ಮುಂದಿನ ದಿನಗಳಲ್ಲಿ ಬಹು ದೊಡ್ಡ ಸ್ವ ಉದ್ಯೋಗಕ್ಕೆ ದಾರಿ ಆಗುವುದರಲ್ಲಿ ಸಂದೇಹವಿಲ್ಲ ಎನಿಸುತ್ತದೆ.

–ರುದ್ರಮೂರ್ತಿ ಎಂ.ಜೆ., ಚಿತ್ರದುರ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT