ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧೈರ್ಯ ಇರುವುದು ಬಳೆ, ಕಡಗದಲ್ಲಲ್ಲ

Last Updated 22 ಸೆಪ್ಟೆಂಬರ್ 2019, 19:45 IST
ಅಕ್ಷರ ಗಾತ್ರ

ಯಾವುದಾದರೂ ವಿಚಾರದ ಬಗ್ಗೆ ತಮ್ಮ ಧೈರ್ಯ, ಶೌರ್ಯವನ್ನು ಸಾಬೀತುಪಡಿಸುವಾಗ ಸಾಮಾನ್ಯವಾಗಿ ಕೆಲವು ಪುರುಷರು ‘ನಾವು ಕೈಗೆ ಬಳೆ ತೊಟ್ಟಿಲ್ಲ’ ಎಂದು ಪದೇ ಪದೇ ಹೇಳುತ್ತಾರೆ. ಅವರ ಅರ್ಥದಲ್ಲಿ, ಕೈಗೆ ಬಳೆ ತೊಡುವುದು ಅಸಹಾಯಕತೆ, ದೌರ್ಬಲ್ಯ ಮತ್ತು ಅಸಮರ್ಥತೆಯನ್ನು ಬಿಂಬಿಸುತ್ತದೆ.

ಅಂತಹವರಿಗೆ ನನ್ನದೊಂದು ಕೋರಿಕೆ, ದಯಮಾಡಿ ಅವರು ಒಮ್ಮೆ ಬಳೆ ತೊಟ್ಟು ನೋಡಲಿ. ಆಗ ತಮ್ಮ ಧೈರ್ಯ, ಶೌರ್ಯವೇನಾದರೂ ಕಡಿಮೆ ಯಾಗುತ್ತದೆಯೇ ಎಂದು ಪರೀಕ್ಷಿಸಿಕೊಳ್ಳಲಿ. ಧೈರ್ಯ ಎಂಬುದು ಆತ್ಮವಿಶ್ವಾಸವೇ ಹೊರತು, ಅದು ಬಳೆ ಅಥವಾ ಕಡಗ ತೊಡುವುದರಿಂದ ಬರುವಂತಹದ್ದಲ್ಲ ಮತ್ತು ಅದು ಪುರುಷ ಅಥವಾ ಮಹಿಳೆಗೆ ಸೀಮಿತವಾದದ್ದೂ ಅಲ್ಲ.

ವಸುಂಧರಾ ಕೆ.ಎಂ., ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT