ಶನಿವಾರ, ಅಕ್ಟೋಬರ್ 31, 2020
27 °C

ವಿದ್ಯಾರ್ಥಿವರ್ಗಕ್ಕೆ ಜವಾಬ್ದಾರಿ ಬರಲಿ

ವಾಚಕರವಾಣಿ Updated:

ಅಕ್ಷರ ಗಾತ್ರ : | |

ಕೆಲ ದಿನಗಳ ಹಿಂದೆ ನಡೆದ ಪೊಲೀಸ್‌ ಕಾನ್‌ಸ್ಟೆಬಲ್‌ ಪರೀಕ್ಷೆಯಲ್ಲಾಗಲೀ ಇತ್ತೀಚೆಗೆ ನಡೆದ ಕೆ-ಸೆಟ್ ಪರೀಕ್ಷೆಯಲ್ಲಾಗಲೀ ಅಥವಾ ಮೈಸೂರು ವಿಶ್ವವಿದ್ಯಾಲಯದ ಈಗಿನ ಪದವಿ ಪರೀಕ್ಷೆಗಳಲ್ಲಾಗಲೀ ವಿದ್ಯಾರ್ಥಿಗಳು ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿದ್ದು ಕಂಡುಬರಲಿಲ್ಲ. ಪರೀಕ್ಷಾ ಕೇಂದ್ರಗಳಲ್ಲಿ ವಿಶ್ವವಿದ್ಯಾಲಯಗಳು ಮತ್ತು ಸರ್ಕಾರ ಎಷ್ಟೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು, ಆರೋಗ್ಯ ಸೌಲಭ್ಯಗಳನ್ನು ಒದಗಿಸಿದರೂ ವಿದ್ಯಾರ್ಥಿಗಳು ಪರೀಕ್ಷೆ ಬರೆದ ನಂತರ ಕಾಲೇಜು, ಕ್ಯಾಂಟೀನ್ ಆವರಣದಲ್ಲಿ, ಬಸ್ ನಿಲ್ದಾಣಗಳಲ್ಲಿ ಕೊರೊನಾ ಸೋಂಕಿನ ಆತಂಕ ಇಲ್ಲದೆ ಪರಸ್ಪರ ಹಸ್ತಲಾಘವ ನೀಡುತ್ತಾ ಆಲಿಂಗನ ಮಾಡುತ್ತಾ ಕೊನೇಪಕ್ಷ ಮಾಸ್ಕ್ ಅನ್ನೂ ಹಾಕಿಕೊಳ್ಳದೆ ಓಡಾಡುತ್ತಿದ್ದರು.

ಕೊರೊನಾದ ಬಗ್ಗೆ ಅನಕ್ಷರಸ್ಥರಿಗೆ ತಿಳಿಹೇಳಬೇಕಾದ ಸುಶಿಕ್ಷಿತ ವರ್ಗವೇ ಈ ರೀತಿ ನಡೆದುಕೊಂಡರೆ ಇನ್ನು ಸಾಮಾನ್ಯ ಜನರ ಸ್ಥಿತಿ ಏನು? ವಿದ್ಯಾರ್ಥಿಗಳ ಈ ನಡೆ ಕೊರೊನಾ ತಡೆಯಲು ಹಗಲು–ರಾತ್ರಿ ಎನ್ನದೆ ಕೆಲಸ ಮಾಡುತ್ತಿರುವ ಕೊರೊನಾ ವಾರಿಯರ್‌ಗಳಿಗೆ ಅಪಮಾನ ಮಾಡಿದಂತೆ. ವಿದ್ಯಾರ್ಥಿಗಳು ಈ ವಿಷಯದಲ್ಲಿ ನಿರ್ಲಕ್ಷ್ಯ ಮಾಡದೆ ಮುಂಜಾಗ್ರತೆ ವಹಿಸಿ, ಕೊರೊನಾ ನಿಯಂತ್ರಣಕ್ಕಾಗಿ ಹೋರಾಡುತ್ತಿರುವವರ ಶ್ರಮವನ್ನು ಗೌರವಿಸಬೇಕು.

ನಟರಾಜು ಜಿ. ಶಾಹೂ, ಕೊಳ್ಳೇಗಾಲ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು