ಭಾನುವಾರ, ನವೆಂಬರ್ 17, 2019
28 °C

ಮಂಗಳಸೂತ್ರಕ್ಕೆ ನಿರ್ಬಂಧ ಸರಿಯಲ್ಲ

Published:
Updated:

ಇಂದಿನಿಂದ (ಸೆ. 23) ಆರಂಭವಾಗಲಿರುವ ಜೂನಿಯರ್‌ ಎಂಜಿನಿಯರ್‌ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಪರೀಕ್ಷಾ ಕೊಠಡಿಗೆ ಕೊಂಡೊಯ್ಯಲು ಅನುಮತಿ ಇಲ್ಲದ ಬಹಳಷ್ಟು ವಸ್ತುಗಳಲ್ಲಿ ಮಂಗಳ ಸೂತ್ರವನ್ನೂ ಸೇರಿಸಲಾಗಿದೆ.

ಇದು ಸಮುದಾಯ ವಿರೋಧಿ ಚಟುವಟಿಕೆ. ಮಂಗಳ ಸೂತ್ರಕ್ಕೆ ತನ್ನದೇ ಆದ ಗೌರವ ಇದೆ. ಹೆಚ್ಚಿನ ಮಹಿಳೆಯರು ಅದನ್ನು ತೆಗೆಯುವುದು ಗಂಡ ತೀರಿಕೊಂಡ ನಂತರ. ಹೀಗಾಗಿ, ಅದನ್ನು ಪರೀಕ್ಷಾ ಕೇಂದ್ರದಲ್ಲಿ ನಿರ್ಬಂಧಿಸುವುದು ಸರಿಯಲ್ಲ.

ಅರವಿಂದ ಬೇವಿನಗಿಡದ, ಕೋಹಳ್ಳಿ, ಅಥಣಿ

ಪ್ರತಿಕ್ರಿಯಿಸಿ (+)