ಭಾನುವಾರ, 15–9–1968

7
ಸುಗ್ರೀವಾಜ್ಞೆ

ಭಾನುವಾರ, 15–9–1968

Published:
Updated:

ರೈಲು ಸಂಚಾರಕ್ಕೆ ಅಡ್ಡಿ ಶಿಕ್ಷಾರ್ಹ ಅಪರಾಧ: ಕೇಂದ್ರದ ಸುಗ್ರೀವಾಜ್ಞೆ

ನವದೆಹಲಿ, ಸೆ. 14– ರೈಲುಗಳ ಸಂಚಾರಕ್ಕೆ ಅಡ್ಡಿ ಉಂಟು ಮಾಡುವಂತಹ ಎಲ್ಲ ಅಪರಾಧಗಳೂ ಶಿಕ್ಷಾರ್ಹವೆಂದು ಕೇಂದ್ರ ಸರಕಾರ ಇಂದು ಸುಗ್ರೀವಾಜ್ಞೆಯೊಂದರಲ್ಲಿ ಘೋಷಿಸಿದೆ.

‘ಭಾರತ್ ಬಂದ್‌’ಗೆ ಜೋಷಿ ಮನವಿ

ಪಟ್ನ, ಸೆ. 14– ಮುಂದಿನ ಗುರುವಾರ ‘ಭಾರತ್ ಬಂದ್’ ಸಂಘಟಿಸಿ ಕೇಂದ್ರ ನೌಕರರಿಗೆ ಬೆಂಬಲ ವ್ಯಕ್ತಪಡಿಸುವಂತೆ ಕೇಂದ್ರ ಸರಕಾರಿ ನೌಕರರ ಸಂಘಗಳ ಸಂಯುಕ್ತ ಕ್ರಿಯಾ ಮಂಡಲಿ ಅಧ್ಯಕ್ಷ ಹಾಗೂ ಅಖಿಲ ಭಾರತ ಎಸ್.ಎಸ್.ಪಿ. ಅಧ್ಯಕ್ಷ ಶ್ರೀ ಎಸ್.ಎಂ. ಜೋಷಿ ಅವರು ಇಂದು ಇಲ್ಲಿ ಕೇಂದ್ರ ಕಾರ್ಮಿಕ ಸಂಘಗಳಿಗೂ ಮನವಿ ಮಾಡಿದ್ದಾರೆ.

ಕನ್ನಡದಲ್ಲೂ ಚಿತ್ರ ತಯಾರಿಸುವ ಆಸೆ ವಿ. ಶಾಂತಾರಾಂಗೆ

‘ಭಾರತದ ಪ್ರದೇಶ ಭಾಷೆಗಳಲ್ಲಿ ಹೆಚ್ಚು ಚಲನಚಿತ್ರಗಳು ಬರಬೇಕು’. ಈ ಮಾತನ್ನು ಒತ್ತಿ ಹೇಳಿದವರು ಪ್ರಸಿದ್ಧ ನಿರ್ಮಾಪಕ–ನಿರ್ದೇಶಕ ಶ್ರೀ ವಿ. ಶಾಂತಾರಾಂ ಅವರು.

ಅವರ ಮುಂದಿನ ಚಿತ್ರಕ್ಕಾಗಿ ರಾಜ್ಯದಲ್ಲಿ ಹೊರಾಂಗಣ ದೃಶ್ಯಗಳನ್ನು ಹುಡುಕಿ ನಿರ್ಧರಿಸಲು ಅವರು ರಾಜ್ಯಕ್ಕೆ ಭೇಟಿ ನೀಡಿದ್ದರು. ಜೋಗ್ ಜಲಪಾತ ಪ್ರದೇಶ, ಮಡಿಕೇರಿ ಮತ್ತಿತರ ಪ್ರದೇಶಗಳಿಗೆ ಸಂದರ್ಶನ ನೀಡಿದರು. ಶ್ರೀಯುತರು ರಾಜ್ಯದ ಚಲನಚಿತ್ರ ಅಭಿವೃದ್ಧಿ ಕಾರ್ಪೊರೇಷನ್ನಿನ ಸದಸ್ಯರಲ್ಲಿ ಒಬ್ಬರು.

ಭಾರತದ ಚಲನಚಿತ್ರ ಪ್ರಪಂಚದಲ್ಲಿ ಶ್ರೀ ಶಾಂತಾರಾಂ ಹೊಸ ಪ್ರಯೋಗಗಳ, ಉತ್ತಮ ಚಿತ್ರಗಳ ಸಾಹಸಿ. ಸಾಹಸಕ್ಕೆ ತಕ್ಕ ಜನಮೆಚ್ಚುಗೆಯ ಗಳಿಕೆ, ಸಂಪಾದನೆಯ ದೃಷ್ಟಿಯಿಂದಲೂ ತೃಪ್ತಿ.

ಸರ್ಕಾರದ ಖರ್ಚಿನಲ್ಲಿ ಶಿಕ್ಷಣ ಪಡೆದು ವಿದೇಶದಲ್ಲಿ ನೆಲೆಸುವ ವೈದ್ಯರಿಗೆ ನೋಟೀಸ್

ಬೆಂಗಳೂರು, ಸೆ. 14– ಸರ್ಕಾರದ ಖರ್ಚಿನಲ್ಲಿ ಹೆಚ್ಚಿನ ವ್ಯಾಸಂಗಕ್ಕಾಗಿ ವಿದೇಶಗಳಿಗೆ ಹೋಗಿ, ಅಲ್ಲಿಯೇ ನೆಲೆಸುವ ವೈದ್ಯರುಗಳ ಮೇಲೆ ಸರ್ಕಾರ ಕ್ರಮ ಕೈಗೊಂಡಿದೆ ಎಂದು ಆರೋಗ್ಯ ಸಚಿವ ಶ್ರೀ ವೈ. ರಾಮಕೃಷ್ಣ ಅವರು ಇಂದು ವಿಧಾನ ಪರಿಷತ್ತಿನಲ್ಲಿ ತಿಳಿಸಿದರು.

ಕೊಡಲಾದ ಹಣವನ್ನು ಹಿಂತಿರುಗಿಸುವಂತೆ ಕೆಲವರಿಗೆ ನೋಟೀಸ್ ಕೊಡಲಾಗಿದೆಯೆಂದೂ ಸಚಿವರು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !