ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶಕ್ಕೆ ತಡೆ: ಕಾನೂನಿಗೆ ಅಗೌರವ...

Last Updated 21 ಅಕ್ಟೋಬರ್ 2018, 20:00 IST
ಅಕ್ಷರ ಗಾತ್ರ

ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಮಹಿಳೆಯರ ಪ್ರವೇಶಕ್ಕೆ ಇದ್ದ ನಿರ್ಬಂಧ ಸುಪ್ರೀಂ ಕೋರ್ಟ್‌ ತೀರ್ಪಿನಿಂದಾಗಿ ತೆರವಾದರೂ ಅರ್ಚಕರು ತಡೆಯೊಡ್ಡುವುದು ಸರಿಯಲ್ಲ. ಅವರ ನಡೆ ಈ ನೆಲದ ಸರ್ವೋಚ್ಚ ನ್ಯಾಯಾಲಯಕ್ಕೆ ತೋರಿದ ಅಗೌರವದಂತೆ. ಪರಂಪರೆ ಹೆಸರಿನಲ್ಲಿ ವಿಧಿಸಿದ್ದ ಕಟ್ಟಳೆಗಳು ಸಡಿಲವಾದ ನಿದರ್ಶನಗಳು ಹಲವಾರಿವೆ. ಕಾಲಕ್ಕೆ ತಕ್ಕಂತೆ ಬದಲಾಗುವುದು ಪ್ರಕೃತಿ ನಿಯಮ. ಇಲ್ಲಿ ಮಾತ್ರ ಆಡಳಿತ ವ್ಯವಸ್ಥೆ ಯಥಾಸ್ಥಿತಿವಾದಿಯಾಗಿರುವುದು ಏಕೆ?

ಮಹಿಳೆಯರ ಪ್ರವೇಶದಿಂದ ದೇಗುಲ ಅಪವಿತ್ರಗೊಳ್ಳವುದಾದರೆ ಅದನ್ನು ನೋಡಿಕೊಳ್ಳಲು ಸರ್ವಶಕ್ತ ಅಯ್ಯಪ್ಪ ಸ್ವಾಮಿ ಇದ್ದಾನೆ. ದರ್ಶನಕ್ಕೆ ಬಂದವರು ಯೋಗ್ಯರೋ ಅಲ್ಲವೋ ಎಂಬುದನ್ನು ನಿರ್ಧರಿಸುವ ಹೊಣೆಯನ್ನು ಸ್ವಾಮಿಗೇ ಬಿಡುವಷ್ಟು ಕೂಡಾ ನಮ್ಮಲ್ಲಿ ಆಸ್ತಿಕತೆ ಇಲ್ಲವೇ? ದೇವರ ಹೆಸರಿನಲ್ಲಿ ದಲ್ಲಾಳಿಗಿರಿ ನಡೆಸಿ, ನೂರಾರು ಜಾತಿ– ಉಪಜಾತಿಗಳನ್ನು ಸೃಷ್ಟಿಸಿದ್ದೇವೆ. ಈ ಪರಂಪರೆಗೆ ಕೊನೆ ಹಾಡಲು ಇನ್ನೆಷ್ಟು ಬಸವಣ್ಣ, ಬುದ್ಧರಂತಹವರು ಹುಟ್ಟಿ ಬರಬೇಕು? ನೆಲದ ಕಾನೂನನ್ನು ಹಾಗೂ ನಾಡಿನ ಸಂವಿಧಾನವನ್ನು ಗೌರವಿಸುವುದು ನಮ್ಮ ಹೊಣೆಗಾರಿಕೆಯಲ್ಲವೇ?

–ಹನುಮಂತ ಪಾಟೀಲ, ಧಾರವಾಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT