ಆತಂಕ ದೂರಗೊಳಿಸಿ

7

ಆತಂಕ ದೂರಗೊಳಿಸಿ

Published:
Updated:

ಅನುದಾನಿತ ಪ್ರೌಢಶಾಲೆಗಳಲ್ಲಿ 2009 ರಿಂದ 2012ರವರೆಗಿನ ಅವಧಿಯಲ್ಲಿ ಖಾಲಿ ಇದ್ದ ಹಿಂದಿ ಶಿಕ್ಷಕರ ಹುದ್ದೆಗಳನ್ನು ಭರ್ತಿಮಾಡಿಕೊಳ್ಳಲು ರಾಜ್ಯ ಸರ್ಕಾರವು ಅನುಮತಿ ನೀಡಿತ್ತು. ಅದರಂತೆ ಪ್ರೌಢಶಾಲೆಗಳ ಆಡಳಿತ ಮಂಡಳಿಯವರು ಹುದ್ದೆಗಳನ್ನು ಭರ್ತಿ ಮಾಡಿ, ನೇಮಕಾತಿ ಅನುಮೋದನೆಗೆ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿದ್ದರು. ಇದಾಗಿ ಮೂರು ವರ್ಷಗಳಾದರೂ ಸರ್ಕಾರ ಯಾವ ಹುದ್ದೆಗೂ ನೇಮಕಾತಿ ಅನುಮೋದನೆ ನೀಡಿರಲಿಲ್ಲ.

2016ರಲ್ಲಿ ಪ್ರೌಢಶಾಲಾ ಶಿಕ್ಷಕರ ವೃಂದ ಮತ್ತು ನೇಮಕಾತಿ ನಿಯಮಗಳನ್ನು ಹೊಸದಾಗಿ ರೂಪಿಸಲಾಗಿದೆ. ಇದಾದ ನಂತರ, ಹೊಸ ನಿಯಮಾವಳಿ ಜಾರಿಯಾಗುವುದಕ್ಕೂ ಹಿಂದಿನ ನೇಮಕಾತಿಗಳನ್ನೂ ‘ನಿಗದಿಪಡಿಸಿರುವ ವಿದ್ಯಾರ್ಹತೆಗೆ ಅನುಗುಣವಾಗಿ ನಡೆದಿಲ್ಲ’ ಎಂದು ಆಕ್ಷೇಪಿಸಲಾಗಿದೆ. ಇದರಿಂದಾಗಿ ಹೊಸ ನಿಯಮ ರೂಪುಗೊಳ್ಳುವ ಮೊದಲೇ ನೇಮಕಗೊಂಡವರ ಬದುಕು ಅತಂತ್ರವಾಗಿದೆ. 2016ರ ಹೊಸ ವೃಂದ ಹಾಗೂ ನೇಮಕಾತಿ ನಿಯಮಗಳನ್ನು ಆ ನಂತರದ ನೇಮಕಾತಿಗಳಿಗೆ ಮಾತ್ರ ಅನ್ವಯಿಸಿ, ಹಿಂದೆಯೇ ಆಗಿರುವ ನೇಮಕಾತಿಗಳಿಗೆ ಸರ್ಕಾರ ಅನುಮೋದನೆ ನೀಡಬೇಕು.

–ಹರಳಹಳ್ಳಿ ಪುಟ್ಟರಾಜು, ಪಾಂಡವಪುರ

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !