ಮಂಗಳವಾರ, ಮೇ 18, 2021
23 °C

ಶಿಕ್ಷಕರ ವರ್ಗಾವಣೆ | ಬೇಕಾದಾಗ ಸಲಹೆ ನೀಡದ ಜಾಣರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿಕ್ಷಕರ ವರ್ಗಾವಣೆ ಕಾಯ್ದೆಯಲ್ಲಿರುವ ನ್ಯೂನತೆಗಳನ್ನು ಸರಿಪಡಿಸುವಂತೆ ವಿಧಾನಪರಿಷತ್ತಿನ ಕೆಲವು ಸದಸ್ಯರು ಆಗ್ರಹಿಸಿರುವುದು (ಪ್ರ.ವಾ., ಆ. 2) ಸರಿಯಷ್ಟೆ. ಕಾಯ್ದೆ ಜಾರಿಯಾಗುವುದಕ್ಕೆ ಮೊದಲು, ಮಸೂದೆಯು ವಿಧಾನಮಂಡಲದ ಉಭಯ ಸದನಗಳಲ್ಲೂ ಚರ್ಚೆಗೆ ಒಳಪಟ್ಟಿರುತ್ತದೆ. ಆಗ ಇವರೆಲ್ಲ ಇದೇ ಸಲಹೆಗಳನ್ನು ನೀಡಿ ಸರಿಪಡಿಸಲು ಮುಂದಾಗದೆ, ಈಗ ಅಧಿಕಾರಿಗಳ ಮೇಲೆ ಗೂಬೆ ಕೂರಿಸಿ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಜಾಣತನದಿಂದ ಮಾತನಾಡಿರುವುದು ಹಾಸ್ಯಾಸ್ಪದ ಎನಿಸುತ್ತದೆ.

ಮೂರೂವರೆ ವರ್ಷಗಳಿಂದ ಕುಂಟುತ್ತಾ ಸಾಗಿದ್ದ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಗೆ ಈಗಷ್ಟೇ ಚಾಲನೆ ದೊರೆತಿದೆ. ಕಾಯ್ದೆಯಲ್ಲಿ ಆದ್ಯತಾ ಪ್ರಕರಣ, ಸೇವಾ ಜ್ಯೇಷ್ಠತೆ ಅನುಸರಿಸಲು ರೂಪಿಸಿರುವ ನಿಯಮಗಳು ಸಹ ಗೊಂದಲದಿಂದ ಕೂಡಿವೆ. ಇದರಿಂದ, ಸೇವೆಯಲ್ಲಿ ಹಿರಿತನವಿರುವ ಸಾವಿರಾರು ಶಿಕ್ಷಕರಿಗೆ ಹಿನ್ನಡೆಯಾಗಿದೆ. ವಸ್ತುಸ್ಥಿತಿ ಹೀಗಿರುವಾಗ, ಕಡ್ಡಾಯ ವರ್ಗಾವಣೆ ಸಮಸ್ಯೆ ಮಾತ್ರ ವಿಧಾನಪರಿಷತ್ ಸದಸ್ಯರಿಗೆ ಎದ್ದು ಕಾಣುವುದು ದುರದೃಷ್ಟಕರ.

-ಪುಟ್ಟದಾಸು, ಮಂಡ್ಯ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು