ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಕಗಳ ಬೇಟೆಯ ‘ಮೃಗಯಾ ವಿನೋದ’

Last Updated 7 ಜುಲೈ 2020, 19:30 IST
ಅಕ್ಷರ ಗಾತ್ರ

ಇಂದಿನ ಉನ್ನತ ಶಿಕ್ಷಣದಲ್ಲಿ ಗುರು– ಶಿಷ್ಯರ ಸಂಬಂಧದ ಪರಿಯನ್ನು ದಾದಾಪೀರ್ ನವಿಲೇಹಾಳ್ ಅವರು ಕೆಲವೇ ಮಾತುಗಳಲ್ಲಿ ಕನ್ನಡಿಯಲ್ಲಿ ತೋರಿಸಿದಂತೆ ಮನವರಿಕೆ ಮಾಡಿಕೊಟ್ಟಿದ್ದಾರೆ (ಸಂಗತ, ಜುಲೈ 7). ಈಗಿನ ತಂತ್ರಜ್ಞಾನ, ವಿಜ್ಞಾನ, ಬಹುಮಾಧ್ಯಮದ ಭರಾಟೆಯಲ್ಲಿ ಗುರುವಿನ ಸ್ಥಾನವು ಅಪ್ರಸ್ತುತವಾಗುವ ಆತಂಕದ ನಡುವೆಯೇ ಹಾಗೆ ಆಗದಂತೆ ನೋಡಿಕೊಳ್ಳುವ ಅನಿವಾರ್ಯ ಸ್ಥಿತಿಯೂ ಗುರುವಿಗೆ ಎದುರಾಗಿದೆ.

ಲೇಖಕರು ಹೇಳುವಂತೆ, ಇಂದಿನ ಅಧ್ಯಾಪಕರಲ್ಲಿ ಗುರುವಿನ ಗೆರೆ ದಾಟಿ ಆಚಾರ್ಯರಾಗುವಂಥವರು ಎಷ್ಟು ಮಂದಿ ಇದ್ದಾರೆ? ಅಂಕಗಳ ಬೇಟೆಯ ‘ಮೃಗಯಾ ವಿನೋದ’ದಲ್ಲಿ ತಲ್ಲೀನವಾಗಿರುವ ಇಂದಿನ ನಮ್ಮ ಉನ್ನತ ಶಿಕ್ಷಣವು, ಕುವೆಂಪು ಅವರ ಆಶಯಕ್ಕೆ ವಿರುದ್ಧವಾಗಿ, ನಮ್ಮ ವಿದ್ಯಾರ್ಥಿಗಳನ್ನು ಭತ್ತ ಬೆಳೆಯುವ ಗದ್ದೆಗಳನ್ನಾಗಿಸದೆ, ಆ ಬೆಳೆಯನ್ನು ತುಂಬುವ ಚೀಲಗಳನ್ನಾಗಿಸುತ್ತಿರುವುದು ವಿಪರ್ಯಾಸವಲ್ಲವೇ?

- ಪ್ರೊ. ಎಸ್.ಬಿ.ರಂಗನಾಥ್,ಸಿದ್ಧನಮಠ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT