ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಬೋಧಕರ ಹುದ್ದೆ: ತ್ವರಿತವಾಗಿ ಭರ್ತಿಯಾಗಲಿ

Last Updated 25 ಅಕ್ಟೋಬರ್ 2021, 20:27 IST
ಅಕ್ಷರ ಗಾತ್ರ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಬೋಧಕರ ಕೊರತೆಯ ಬಗ್ಗೆ ಬೆಳಕು ಚೆಲ್ಲುವ ಲೇಖನದಲ್ಲಿ (ಪ್ರ.ವಾ., ಅ. 24) ನಮ್ಮ ಬಹುತೇಕ ವಿಶ್ವವಿದ್ಯಾಲಯಗಳಲ್ಲಿ ಶೇ 50ರಷ್ಟು ಬೋಧಕರ ಹುದ್ದೆಗಳು ಖಾಲಿ ಇವೆ ಎಂಬ ವಿಷಯ ತಿಳಿದು ಗಾಬರಿಯಾಯಿತು. ಪಾಠಪ್ರವಚನಗಳ ಮೂಲಕ ಮಕ್ಕಳ ಭವಿಷ್ಯವನ್ನು ರೂಪಿಸುವ ವಿಶ್ವವಿದ್ಯಾಲಯಗಳ ಆಧಾರಸ್ತಂಭವಾದ ಬೋಧಕರೇ ಇಲ್ಲದ ಮೇಲೆ ಇನ್ನು ವಿಶ್ವವಿದ್ಯಾಲಯಗಳು ಇದ್ದು ಪ್ರಯೋಜನವೇನು? ಅತಿಥಿಉಪನ್ಯಾಸಕರನ್ನು ನೇಮಿಸಿಕೊಂಡು ಅವರಿಗೆ ಸೂಕ್ತ ತರಬೇತಿ ನೀಡದೆ, ಗೌರವಯುತವಾದ ಸಂಭಾವನೆಯನ್ನೂ ಸಕಾಲದಲ್ಲಿ ನೀಡದೆ, ಸೇವಾ ಅಭದ್ರತೆಯಲ್ಲಿ ಕಾರ್ಯನಿರ್ವಹಿಸುವವರಿಂದ ಎಂತಹ ಸೇವೆಯನ್ನು ನಿರೀಕ್ಷಿಸಲಾದೀತು?

ಇನ್ನು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅನುಷ್ಠಾನ ಮಾಡುತ್ತಿರುವುದು ಹೆಮ್ಮೆಯ ಸಂಗತಿಯಾದರೂ, ವಾಸ್ತವ ವಾಗಿ ಅನುಷ್ಠಾನ ಮಾಡಬೇಕಾದ ಬೋಧಕರೇ ಅಗತ್ಯ ಸಂಖ್ಯೆಯಲ್ಲಿ ಇಲ್ಲವೆಂದರೆ ಹೇಗೆ? ಇವೆಲ್ಲದರ ಪರಿಣಾಮವನ್ನು ನಿಜಕ್ಕೂ ಎದುರಿಸುವವರು ವಿದ್ಯಾರ್ಥಿಗಳು. ಕಲಿಯಬೇಕಿರುವ ಏನನ್ನೂ ಕಲಿಯದೆ ಸೂಕ್ತ ಉದ್ಯೋಗಗಳು ದೊರಕದೆ ಅವರು ನಿರುದ್ಯೋಗಿಗಳಾಗುತ್ತಿದ್ದಾರೆ. ಸುಧಾರಣೆಗಳು ಶುರುವಾಗಬೇಕಾದದ್ದು ಮೊದಲು, ವಿಶ್ವವಿದ್ಯಾಲಯಗಳ ಬಗ್ಗೆ ಆಳುವ ವರ್ಗದವರ ಮನೋಧೋರಣೆಗಳಿಂದ. ಇದು ಆದಾಯ ತರದ ವಲಯವೆಂಬ ತಿರಸ್ಕಾರ ಬಿಟ್ಟು ದೇಶದ ಭವಿಷ್ಯ ರೂಪಿಸುವ ಆದ್ಯತಾ ವಲಯವೆಂದು ಪರಿಗಣಿಸಿ, ಬೋಧಕ ಹುದ್ದೆಗಳನ್ನು ತ್ವರಿತವಾಗಿ, ಪಾರದರ್ಶಕ ವ್ಯವಸ್ಥೆಯ ಮೂಲಕ ತುಂಬಬೇಕಾಗಿದೆ.

ಮಧುಸೂದನ್, ಗೌರಿಬಿದನೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT