ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಪ್ರಜಾಸತ್ತೆಯ ಕ್ರೂರ ಅಣಕ

Last Updated 15 ಡಿಸೆಂಬರ್ 2022, 19:31 IST
ಅಕ್ಷರ ಗಾತ್ರ

ಇದೇ 19ರಿಂದ ಬೆಳಗಾವಿಯಲ್ಲಿ ಆರಂಭವಾಗಲಿರುವ ವಿಧಾನಮಂಡಲದ ಚಳಿಗಾಲದ ಅಧಿವೇಶನವು ಧರಣಿ-ಪ್ರತಿಭಟನೆ, ಬಹಿಷ್ಕಾರಗಳಿಗೆ ತುತ್ತಾಗಿ, ಕಾಟಾಚಾರಕ್ಕೆ ನಡೆಯದಿರಲಿ. ಜನರ ಕೋಟ್ಯಂತರ ರೂಪಾಯಿ ತೆರಿಗೆ ಹಣ ಮತ್ತು ಮಾನವಶಕ್ತಿ ವ್ಯಯಿಸಿ ತಯಾರಾಗಿರುವ ಅನೇಕ ಪ್ರಮುಖ ಅಧ್ಯಯನ ವರದಿಗಳು, ತನಿಖಾ ವರದಿಗಳು ರಾಜಕೀಯ ಕಾರಣಗಳಿಗಾಗಿ ಮತ್ತು ಹೊಂದಾಣಿಕೆ ರಾಜಕಾರಣದಿಂದಾಗಿ ಈವರೆಗೂ ಅಧಿವೇಶನದಲ್ಲಿ ಮಂಡನೆಯಾಗಿ ಚರ್ಚಿತವಾಗದೆ ಅನೇಕ ವರ್ಷಗಳಿಂದ ನನೆಗುದಿಗೆ ಬಿದ್ದಿವೆ. ಈ ಅಧಿವೇಶನದಲ್ಲಾದರೂ ಅವು ಮಂಡಿತವಾಗಿ, ಅವುಗಳ ಕುರಿತು ಗಂಭೀರ, ವ್ಯಾಪಕ ಮತ್ತು ಅರ್ಥಪೂರ್ಣ ಚರ್ಚೆಯಾಗಬೇಕಾದ
ಅವಶ್ಯಕತೆಯಿದೆ.

ಆದರೆ, ಈ ವರದಿಗಳನ್ನು ಸದನದಲ್ಲಿ ಚರ್ಚಿಸದ ಆಡಳಿತ ಮತ್ತು ವಿರೋಧ ಪಕ್ಷಗಳ ನೇತಾರರು, ಜನರನ್ನು ಮರುಳುಗೊಳಿಸಿ, ಅವರ ಮೆಚ್ಚುಗೆ ಗಳಿಸುವುದಕ್ಕಾಗಿ ಅವನ್ನು ವೇದಿಕೆಗಳಲ್ಲಿ ಮಾತ್ರ ಪ್ರಸ್ತಾಪಿಸಿ, ಪರಸ್ಪರ ನಿಂದನೆಗೆ ಅವನ್ನು ದುರುಪಯೋಗಪಡಿಸಿಕೊಳ್ಳುತ್ತಿರುವುದು ಪ್ರಜಾಸತ್ತೆಯ ಕ್ರೂರ ಅಣಕ.

⇒ತಿಪ್ಪೂರು ಪುಟ್ಟೇಗೌಡ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT