ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ| ಪುಸ್ತಕಕ್ಕೆ ಅಗೌರವ ತರವಲ್ಲ

Last Updated 19 ಜೂನ್ 2022, 19:31 IST
ಅಕ್ಷರ ಗಾತ್ರ

ಪರಿಷ್ಕೃತ ಪಠ್ಯಪುಸ್ತಕಗಳ ವಿರುದ್ಧ ಪಠ್ಯಪುಸ್ತಕವನ್ನು ಹರಿದುಹಾಕುವ ಮೂಲಕ ಪ್ರತಿಭಟಿಸಿರುವುದು ಸರಿಯಲ್ಲ. ಬಾಲ್ಯದಿಂದಲೂ ಪಠ್ಯಪುಸ್ತಕಗಳ ಬಗ್ಗೆ ಬಹಳ ಗೌರವದಿಂದ ನಡೆದುಕೊಳ್ಳಲು ಕಲಿಸಲಾಗುತ್ತದೆ. ಅವುಗಳ ಬಗ್ಗೆ ಅಗೌರವ ತೋರಿಸಿದರೆ ವಿದ್ಯೆ ಒಲಿಯುವುದಿಲ್ಲ ಎಂಬ ಭಾವನೆ ಮೂಡಿರುತ್ತದೆ. ನಮ್ಮೆಲ್ಲರ ಜೀವನದಲ್ಲಿ ಪಠ್ಯಪುಸ್ತಕಗಳಿಗೆ ವಿಶೇಷ ಸ್ಥಾನಮಾನವಿದೆ. ಅವುಗಳನ್ನು ನೆಲದ ಮೇಲೆ ಬಿಸಾಡುವುದಾಗಲೀ ಆಕಸ್ಮಿಕವಾಗಿ ಕಾಲು ತಾಗಿಸುವುದಾಗಲೀ ಮಾಡಿದಲ್ಲಿ ಅಪರಾಧಿ ಭಾವ ಮೂಡುವಷ್ಟರಮಟ್ಟಿಗೆ ಎಲ್ಲರಲ್ಲಿ ಒಂದು ಗೌರವಪೂರ್ವಕ ಸ್ಥಾನಮಾನ ನೀಡಲಾಗಿದೆ. ಅವುಗಳ ಒಳಗಿನ ವಿಷಯಗಳ ಬಗ್ಗೆ ಯಾವುದೇ ತರಹದ ಭಿನ್ನಾಭಿಪ್ರಾಯ ಇದ್ದರೂ ಪುಸ್ತಕ ಹರಿದು ವಿರೋಧಿಸುವ ಕ್ರಮ ಸರಿಯಲ್ಲ.

- ಎ.ಜೆ.ಜಾವೀದ್,ಹಾಸನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT