ಸಣ್ಣ ತಪ್ಪುಗಳಿಗೆ ತನ್ನಿ ತಿದ್ದೋಲೆ
ಪಠ್ಯಪುಸ್ತಕಕ್ಕೆ ಸಂಬಂಧಿಸಿದಂತೆ ‘ಮಣಿದ ಸರ್ಕಾರ!’ ಎಂಬ ಪದವೇ ದಾರಿತಪ್ಪಿಸುವಂಥದ್ದು. ಇದು ಹಲವು ಅನುಮಾನಗಳಿಗೆ ಎಡೆ ಮಾಡುತ್ತದೆ. ಸರ್ಕಾರವು ರಂಗೋಲಿ ಕೆಳಗೆ ನುಸುಳುವ ಕೆಲಸ ಮಾಡಹೊರಟಿದೆ. ರೋಹಿತ್ ಚಕ್ರತೀರ್ಥ ಅವರು ಮಾಡಿದ ಪರಿಷ್ಕರಣೆಯನ್ನು ಪೂರ್ಣ ಹಿಂಪಡೆಯಬೇಕು. ಆರ್ಎಸ್ಎಸ್ ಪ್ರಣೀತ ಪಠ್ಯವು ಬೆಳೆವ ಮಕ್ಕಳ ಮನಸ್ಸಿಗೆ ವಿಷ ಉಣಿಸುವಂತಹದ್ದು. ಪ್ರೊ. ಬರಗೂರು ರಾಮಚಂದ್ರಪ್ಪ ನೇತೃತ್ವದ ಸಮಿತಿಯ ಪಠ್ಯವನ್ನೇ ಮುಂದುವರಿಸಬೇಕು. ಅಲ್ಲಿ ಬಸವಣ್ಣನವರ ಬಗ್ಗೆ ಇರುವ ಮಾಹಿತಿ, ಇತರ ಬರಹದಲ್ಲಿ ಮತ್ತೇನಾದರೂ ಕಣ್ತಪ್ಪಿ ಸಣ್ಣ ತಪ್ಪುಗಳು ನುಸುಳಿದ್ದರೆ ಅವಕ್ಕೆ ‘ತಿದ್ದೋಲೆ’ ಇರಲಿ.
-ಆರ್.ಜಿ.ಹಳ್ಳಿ ನಾಗರಾಜ, ಬೆಂಗಳೂರು
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.