ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಭಕ್ಕೆ ಮಾತ್ರ ಪಾಲುದಾರರೇ?

Last Updated 19 ಫೆಬ್ರುವರಿ 2019, 20:00 IST
ಅಕ್ಷರ ಗಾತ್ರ

‌ವಿಕಾಸಸೌಧದ ಕಟ್ಟಡಕ್ಕೆ ಕಳಪೆ ಗುಣಮಟ್ಟದ ಕಲ್ಲು ಬಳಸಿರುವುದನ್ನು ತನಿಖೆಯಿಂದ ಪತ್ತೆ ಮಾಡಿ, ಸಂಬಂಧಪಟ್ಟ ಎಂಜಿನಿಯರ್ ಹಾಗೂ ಗುತ್ತಿಗೆದಾರರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿರುವ ಲೋಕಾಯುಕ್ತರಿಗೆ ಅಭಿನಂದನೆ.

ಆದರೆ, ಕಳಪೆ ಕಾಮಗಾರಿ ಮಾಡುವ ಪರಿಸ್ಥಿತಿಯನ್ನು ನಿರ್ಮಾಣ ಮಾಡಿದವರ ವಿರುದ್ಧ ಯಾವ ಕ್ರಮ ಕೈಗೊಳ್ಳಲಾಗುವುದು? ಅಂದರೆ, ಕಳಪೆ ಕಾಮಗಾರಿಯ ಲಾಭಾಂಶದಲ್ಲಿ ಪಾಲು ಪಡೆದವರನ್ನೂ ಪತ್ತೆ ಹಚ್ಚಿ ಅವರ ವಿರುದ್ಧ ಸಹ ಕ್ರಮ ಜರುಗಿಸಬೇಕು. ಲಾಭಕ್ಕೆ ಮಾತ್ರ ಪಾಲುದಾರರು, ಶಿಕ್ಷೆಗೆ ಬೇಡವೇ? ಅನ್ಯಾಯ, ಮೋಸದಿಂದ ಜನರ ತೆರಿಗೆಯ ಹಣವನ್ನು ಕೂತಲ್ಲೇ ನಿರಾತಂಕವಾಗಿ ಪಡೆದ ಪಾಲುದಾರರು ಯಾರೇ ಆಗಿರಲಿ, ಅವರಿಗೆ ಗರಿಷ್ಠ ಶಿಕ್ಷೆಯಾಗಬೇಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT