ಶುಕ್ರವಾರ, ಡಿಸೆಂಬರ್ 13, 2019
26 °C

ಆ ಮಾತು ಈಗಲೂ ಪ್ರಸ್ತುತ

ವಾಚಕರವಾಣಿ Updated:

ಅಕ್ಷರ ಗಾತ್ರ : | |

ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಸಂಸ್ಕೃತ ಪಾಠ ಮಾಡಲು ಎಲ್ಲಾ ಅರ್ಹತೆಯಿರುವ ಮುಸ್ಲಿಂ ಅಧ್ಯಾಪಕರೊಬ್ಬರು ವಿಧ್ಯುಕ್ತ ಆಯ್ಕೆ ಪ್ರಕ್ರಿಯೆಯಲ್ಲಿ ನೇಮಕವಾಗಿರುವುದರ ವಿರುದ್ಧ ವಿದ್ಯಾರ್ಥಿಗಳ ಪ್ರತಿಭಟನೆ ವ್ಯಾಪಕವಾಗಿ, ಮಾಧ್ಯಮದಲ್ಲಿ ವರದಿಯಾಗಿದೆ. ಈ ವೇಳೆ, ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ಕುರಿತ ಸಂಗತಿಯೊಂದು ನನಗೆ ನೆನಪಿಗೆ ಬರುತ್ತಿದೆ. ಜ್ಯೋತಿಬಾ ಫುಲೆ ಅವರನ್ನು ಬಲ್ಲವರಾಗಿದ್ದ ಅಂಬೇಡ್ಕರ್ ಅವರ ತಂದೆ ರಾಮಜೀ ಅಂಬೇಡ್ಕರ್ ಅವರು ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಮಗನನ್ನು ಕುರಿತು ಹೇಳಿದ್ದು ದಾಖಲಾಗಿದೆ: ‘ಅಸ್ಪೃಶ್ಯತೆಯನ್ನು ಗಮನಿಸಿ ಅರ್ಥಮಾಡಿಕೊಳ್ಳುವುದು ಅವಶ್ಯಕ; ಗ್ರಾಮದ ಕೆಲವು ಬಾವಿಗಳಿಂದ ನೀರು ಕುಡಿಯುವುದು, ಶಾಲೆಯ ಇತರ ವಿದ್ಯಾರ್ಥಿಗಳ ಜೊತೆಯಲ್ಲಿ ಕುಳಿತು ಊಟ ಮಾಡುವುದು ಅಥವಾ ಸಂಸ್ಕೃತವನ್ನು ಕಲಿಯುವುದು ಇವೆಲ್ಲವನ್ನೂ ನಿಷೇಧಿಸಲಾಗಿದೆ. ಆದರೆ, ಅದನ್ನು ಛಲದಿಂದ ಎದುರಿಸಬೇಕು’ ಎಂದ ಆ ಮಾತುಗಳು ಈಗಲೂ ಪ್ರಸ್ತುತ.

ಪ್ರೊ. ಬಿ.ಕೆ.ಚಂದ್ರಶೇಖರ್, ಬೆಂಗಳೂರು

ಪ್ರತಿಕ್ರಿಯಿಸಿ (+)