ಶನಿವಾರ, ಜೂನ್ 19, 2021
28 °C

ವಾಚಕರ ವಾಣಿ: ಚಿಂತನೆಗೆ ಹಚ್ಚಿದ ಸಮಂಜಸ ವಿಚಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನ್ಯಾಯಾಂಗ ನಿಂದನೆಗೆ ಸಂಬಂಧಿಸಿದ ಸಂಪಾದಕೀಯವು (ಪ್ರ.ವಾ., ಆ. 19) ಸಂದರ್ಭೋಚಿತವೂ ವಿಚಾರಪರವೂ ಆಗಿದೆ. ನ್ಯಾಯಾಂಗದ ಶಕ್ತಿ, ಘನತೆಯನ್ನು ಎತ್ತಿ ಹಿಡಿಯುವ ಮೂಲಕವೇ ಸಾರ್ವಜನಿಕರ ಹಲವು ಹಕ್ಕುಗಳನ್ನು ರಕ್ಷಿಸಲು ಕಾರಣರಾದ ನ್ಯಾಯವಾದಿ ಪ್ರಶಾಂತ್‌ ಭೂಷಣ್‌, ನ್ಯಾಯಾಲಯದ ಘನತೆಗೆ ಕುಂದುಂಟು ಮಾಡುವ ದುರುದ್ದೇಶ ಹೊಂದಿರುತ್ತಾರೆ ಎಂಬುದು ಸುಲಭದಲ್ಲಿ ನಂಬಬಹುದಾದ ವಿಚಾರವಲ್ಲ.

ಸಂಪಾದಕೀಯವು ಪ್ರಸ್ತಾಪಿಸಿರುವ ನ್ಯಾಯಮೂರ್ತಿ ಕೃಷ್ಣ ಅಯ್ಯರ್ ಅವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಂರಕ್ಷಣೆಗೆ ಸಂಬಂಧಿಸಿದಂತೆ ಗಮನಾರ್ಹ ಕೆಲಸ ಮಾಡಿದ್ದಾರೆ. ಈ ಮೂಲಕ ಭಾರತವು ಜಾಗತಿಕ ನ್ಯಾಯಶಾಸ್ತ್ರಕ್ಕೆ, ಗಣಿತಕ್ಕೆ ಸೊನ್ನೆ (0) ಎಂಬ ಕೊಡುಗೆ ನೀಡಿದಷ್ಟೇ ದೊಡ್ಡ ಪರಿಕಲ್ಪನೆಯನ್ನು ಕೊಟ್ಟಂತಾಗಿದೆ. ಇಂತಹ ಸಾರ್ವಜನಿಕ ಹಿತಾಸಕ್ತಿಯ ನ್ಯಾಯಶಾಸ್ತ್ರದ ತತ್ವವನ್ನು ಮುಂದುವರಿಸಲು ಕಾರಣರಾದ ಮುಖ್ಯ ನ್ಯಾಯವಾದಿಯೊಬ್ಬರ ಬಗ್ಗೆ ಸಕಾರಾತ್ಮಕವಾಗಿ ಚಿಂತಿಸುವ ಕುರಿತು ಪತ್ರಿಕೆಯು ಸಮಂಜಸವಾದ ವಿಚಾರಗಳನ್ನು ಹೇಳಿ ಚಿಂತನೆಗೆ ಹಚ್ಚಿದೆ.

–ಎಸ್.ಆರ್. ವಿಜಯಶಂಕರ, ಬೆಂಗಳೂರು

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.