ಮಂಗಳವಾರ, ಡಿಸೆಂಬರ್ 6, 2022
20 °C

ವಾಚಕರ ವಾಣಿ: ಬೇರೆ ಬೇರೆ ಭಾಷೆಯಲ್ಲಿ ಬೇರೆ ಬೇರೆ ಅರ್ಥ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಹಿಂದೂ’ ಎಂಬ ಪದಕ್ಕೆ ಪರ್ಷಿಯನ್ ಭಾಷೆಯಲ್ಲಿ ಅಶ್ಲೀಲ ಅರ್ಥವಿದೆ ಎನ್ನುವವರು ಒಂದು ವಿಷಯವನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು. ಪರ್ಷಿಯನ್ ಅರ್ಥ ಬಿಡಿ. ಕನ್ನಡದ ‘ಸ್ವಾರ್ಥಿ’ ಎಂಬ ಪದಕ್ಕೆ ಇಂಗ್ಲಿಷ್‌ನಲ್ಲಿ (swarthy) ‘ಕಪ್ಪಾದ’ ಅಥವಾ ‘ಬಿಸಿಲಿನಲ್ಲಿ ಬೆಂದ’ ಎಂಬ ಅರ್ಥಗಳಿವೆ. ಹಾಗೆಯೇ ಕನ್ನಡದಲ್ಲಿ ‘ಎಕ್ಕಡ’ ಎನ್ನುವ ಪದಕ್ಕೆ ತೆಲುಗಿನಲ್ಲಿ ‘ಎಲ್ಲಿ?’ ಎಂಬ ಅರ್ಥ ಬರುತ್ತದೆ. ಹೀಗೆ ಹೇಳುತ್ತಾ ಹೋದರೆ ಅನೇಕ ಶಬ್ದಗಳು ಬೇರೆ ಬೇರೆ ಭಾಷೆಗಳಲ್ಲಿ ಬೇರೆ ಬೇರೆ ಅರ್ಥಗಳಿಂದ ಕೂಡಿರುತ್ತವೆ.

ನಾವು ಯಾವ ಭಾಷೆಯಲ್ಲಿ ಮಾತನಾಡುತ್ತಿರುತ್ತೇವೆಯೋ ಅಥವಾ ಬರೆಯುತ್ತಿರುತ್ತೇವೆಯೋ ಆಯಾ ಭಾಷೆಗೆ ತಕ್ಕಂತೆ ಅರ್ಥೈಸಿಕೊಳ್ಳಬೇಕೇ ವಿನಾ ಇನ್ನೊಂದು ಭಾಷೆಯಲ್ಲಿ ಇದರ ಪದ ವ್ಯತ್ಯಾಸ ಇರುವುದರ ಕಡೆಗೆ ಗಮನ ಕೊಡಬಾರದು. ಈ ವಿಷಯದಲ್ಲಿ ವಿವಾದ ಸೃಷ್ಟಿಸಿ ಸಮಜಾಯಿಷಿ ಕೊಟ್ಟುಕೊಳ್ಳುವುದು ಉಚಿತವಲ್ಲ.

–ಎಚ್.ವಿ.ಶ್ರೀಧರ್, ಬೆಂಗಳೂರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು