ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡದ ಪದಗಳಿಲ್ಲವೇ?

Last Updated 29 ಏಪ್ರಿಲ್ 2020, 20:00 IST
ಅಕ್ಷರ ಗಾತ್ರ

ಕೊರೊನಾ ವೈರಸ್‌ ಕಾಣಿಸಿಕೊಂಡಾಗಿನಿಂದ ನಮ್ಮ ಮಾಧ್ಯಮಗಳಲ್ಲಿ ಅದರ ಬಗೆಗಿನ ವಿಚಾರಗಳಲ್ಲಿ ಇಂಗ್ಲಿಷ್‌ ಪದಗಳು ಹೆಚ್ಚಾಗಿ ಬಳಕೆಯಾಗುತ್ತಿವೆ. ಕನ್ನಡದಲ್ಲಿ ಅವುಗಳಿಗೆ ಪರ್ಯಾಯವಾದ ಪದಗಳು ಇಲ್ಲವೇನೋ ಎಂಬಷ್ಟರ ಮಟ್ಟಿಗೆ ಅವು ರಾರಾಜಿಸುತ್ತಿವೆ. ಲಾಕ್‌ಡೌನ್‌, ಸೀಲ್‌ಡೌನ್‌, ಗ್ರೀನ್‌ ಜೋನ್‌, ಡೇಂಜರ್‌ ಜೋನ್...‌ ಇತ್ಯಾದಿ.

ಇಂಗ್ಲಿಷ್‌ ಗೊತ್ತಿಲ್ಲದವರಿಗೆ ಈ ಪದಗಳು ಅರ್ಥವಾಗುವುದು ಹೇಗೆ? ಹೀಗಾಗಿ, ಸಮಾನಾರ್ಥದ ಕನ್ನಡದ ಪದಗಳನ್ನು ಬಳಸುವುದು ಉತ್ತಮ. ಅಂತಹ ಪದಗಳಿಗೆ ಕನ್ನಡದಲ್ಲಿ ಕೊರತೆ ಇರಲಾರದು.

-ಕಿಕ್ಕೇರಿ ಎಂ. ಚಂದ್ರಶೇಖರ್‌, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT