ಮಣ್ಣಿಗೆ ಬೆ(ನೆ)ಲೆ ಇಲ್ಲವೇ?

7

ಮಣ್ಣಿಗೆ ಬೆ(ನೆ)ಲೆ ಇಲ್ಲವೇ?

Published:
Updated:

ಮನುಷ್ಯ ಸತ್ತರೆ ಮಣ್ಣಿಗೆ. ಮಣ್ಣೇ ಸತ್ತರೆ ಎಲ್ಲಿಗೆ? ಸರ್ಕಾರದ ಯೋಜನೆಗಳಿಗೆ ಮಣ್ಣನ್ನು ಪುಕ್ಕಟೆಯಾಗಿ ಯರ್‍ರಾಬಿರ‍್ರಿ ಬಳಸುತ್ತಿದ್ದಾರೆ. ರಸ್ತೆ ನಿರ್ಮಾಣ, ಕೆರೆ– ಕಟ್ಟೆ ನಿರ್ಮಾಣ ಹಾಗೂ ಇತರ ನಿರ್ಮಾಣ ಕಾಮಗಾರಿಗಳಿಗೆ ಮಣ್ಣನ್ನು ರಸ್ತೆ ಬದಿಯಿಂದ, ಕಾಡುಗಳಿಂದ, ನೆಡುತೋಪುಗಳಿಂದ ಪುಕ್ಕಟೆಯಾಗಿ ತಂದು ಸುರಿದು ತಮ್ಮ ಕೆಲಸ ಮಾಡಿಕೊಳ್ಳುತ್ತಿದ್ದಾರೆ. ಗುತ್ತಿಗೆದಾರರಿಗೆ ಸರ್ಕಾರವು ಮಣ್ಣಿನ ಬೆಲೆಯನ್ನು ಸೇರಿಸಿಯೇ ಇಂತಿಷ್ಟು ಮೊತ್ತಕ್ಕೆ ಅಂತ ಕಾಮಗಾರಿಯನ್ನು ವಹಿಸಿರುತ್ತದೆ. ಆದರೆ ಅವರಾರೂ ಮಣ್ಣಿಗೆ ನಯಾಪೈಸೆ ನೀಡುತ್ತಿಲ್ಲ!

ರಸ್ತೆ ಪಕ್ಕದಲ್ಲಿ ಗುಂಡಿ ತೆಗೆದು ಅಲ್ಲಿಂದ ಮಣ್ಣು ಎತ್ತೊಯ್ದ ಪರಿಣಾಮ ರಸ್ತೆ ಕುಸಿತ, ಅಪಘಾತಗಳಾಗುತ್ತಿವೆ. ಇಂತಹ ಅವಘಡಗಳಿಗೆ ಅವರೇ ಕಾರಣರು. ಇದರಿಂದ ಜೀವಹಾನಿ, ಸರ್ಕಾರದ ಧನಹಾನಿ. ಜತೆಗೆ ಮಣ್ಣಿನ ದುರ್ಬಳಕೆ. ಆದಕಾರಣ ಮಣ್ಣಿನ ಮಹತ್ವದ ಬಗ್ಗೆ ಅಧಿಕಾರಿಗಳಲ್ಲಿ, ಜನಪ್ರತಿನಿಧಿಗಳಲ್ಲಿ ಹಾಗೂ ನಾಗರಿಕರಲ್ಲಿ ಜಾಗೃತಿ ಮೂಡಿಸುವುದು ಅಗತ್ಯ.

ಮಂಜುನಾಥ ಆರ್.ಬಿ., ಕಡೂರು

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !