ಕಿಸೆಗಳ್ಳರ ಕರಾಮತ್ತು

7

ಕಿಸೆಗಳ್ಳರ ಕರಾಮತ್ತು

Published:
Updated:

ಪಿಕ್ ಪಾಕೆಟ್ ಗ್ಯಾಂಗ್‌ಗಳು ಬೆಂಗಳೂರಿನಲ್ಲಿ ಸಕ್ರಿಯವಾಗಿವೆ. ನೀವು ಕನ್ನಡಕ ಹಾಕಿದ್ದರೆ ಒಬ್ಬ ಬಂದು ಅದನ್ನು ಬೀಳಿಸುತ್ತಾನೆ. ನೀವು ಅದನ್ನು ತೆಗೆದುಕೊಳ್ಳಲು ಬಗ್ಗಿದಾಗ ಪಿಕ್ ಪಾಕೆಟ್ ಮಾಡುತ್ತಾರೆ. ಕಿಸೆಗೆ ಕತ್ತರಿ ಬಿದ್ದಿರುವುದು ನಿಮಗೆ ಗೊತ್ತೇ ಆಗುವುದಿಲ್ಲ. ಬಸ್‌ನಿಂದ ಇಳಿದು ಕಿಸೆ ತಡಕಾಡಿದರೆ ಆಗ ಗಮನಕ್ಕೆ ಬರುತ್ತದೆ. ಈ ಬಗ್ಗೆ ಪೊಲೀಸರಿಗೆ ದೂರು ಕೊಟ್ಟರೂ ಏನೂ ಪ್ರಯೋಜನವಾಗದು.

ನಗರ ಸಾರಿಗೆ ಬಸ್ಸಿನಲ್ಲಿ ನೀವು ಕುಳಿತಿದ್ದರೆ ಒಬ್ಬ ಬಂದು ವಾಂತಿ ಮಾಡಬೇಕೆಂದು ಕಿಟಕಿ ಹತ್ತಿರ ಬಗ್ಗುತ್ತಾನೆ. ಆಗ ನೀವು ಕರುಣೆ ತೋರಿ ಎದ್ದು ಜಾಗ ಕೊಟ್ಟರೆ ಅವನು ಕಿಟಕಿಯಲ್ಲಿ ಬಗ್ಗುತ್ತಾನೆ, ಆ ಕ್ಷಣದಲ್ಲಿ ಮತ್ತೊಬ್ಬ ಕಿಸೆಯಲ್ಲಿದ್ದುದನ್ನು ಎಗರಿಸುತ್ತಾನೆ. ಬಸ್ಸಿನಲ್ಲಿ ಕೂಡಲು ಜಾಗವಿಲ್ಲದಿದ್ದರೆ ನಿಂತಿರುವಿರಿ. ಆಗ ನಿಮ್ಮನ್ನು ಒಬ್ಬ ಪಕ್ಕಕ್ಕೆ ತಳ್ಳಿ ಅಡ್ಡ ನಿಲ್ಲುತ್ತಾನೆ. ಇನ್ನೊಬ್ಬ ತನ್ನ ಕರಾಮತ್ತು ನಡೆಸಿರುತ್ತಾನೆ. ನನಗೆ 75 ವರ್ಷ ವಯಸ್ಸು. ಬಿಎಂಟಿಸಿ ಪ್ರಯಾಣದ ಅನುಭವ ಇದು. ಹಿರಿಯರು ಎಚ್ಚರದಿಂದ ಇರಬೇಕು.

ಪ್ರಹ್ಲಾದ ರಾವ್, ಬೆಂಗಳೂರು

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !