ಗುರುವಾರ , ಆಗಸ್ಟ್ 22, 2019
27 °C

ಕೆಲಸದ ಸಮಯ ನಿಗದಿಯಾಗಲಿ

Published:
Updated:

ನೌಕರರು, ವ್ಯಾಪಾರಿಗಳು, ಕಾರ್ಮಿಕರು, ವಿದ್ಯಾರ್ಥಿಗಳು, ಗೃಹಿಣಿಯರು, ಅಷ್ಟೇ ಯಾಕೆ ಎಲ್.ಕೆ.ಜಿ ಮಕ್ಕಳಿಗೂ ನಿತ್ಯ ಕೆಲಸದ ಸಮಯ ನಿಗದಿ ಆಗಿರುತ್ತದೆ. ಆ ಸಮಯದಲ್ಲಿ ಅವರು ಇಂತಿಷ್ಟು ಕೆಲಸ ಮಾಡಲೇಬೇಕಾದ ನಿರ್ಬಂಧ ಇರುತ್ತದೆ. ಆದರೆ, ಈ ಜನಪ್ರತಿನಿಧಿಗಳಿಗೆ  ಸಾರ್ವಜನಿಕರ ಕೆಲಸ ಮಾಡಲು ಯಾಕೆ ಸಮಯ ನಿಗದಿ ಇಲ್ಲ? ಇವರು ಯಾವಾಗ ಸಿಗುತ್ತಾರೆ ಎಂಬುದು ತಿಳಿಯದೆ, ಸಣ್ಣಪುಟ್ಟ 
ಕೆಲಸಕ್ಕಾಗಿ ಜನರು ಇಡೀ ದಿನ ಇವರಿಗಾಗಿ ಕಾಯಬೇಕಾಗಿದೆ. ಕೆಲವರಂತೂ ತಿಂಗಳುಗಟ್ಟಲೆ ತಮ್ಮ ಕಚೇರಿಗೆ ಅಥವಾ ಕ್ಷೇತ್ರಕ್ಕೆ ಬರುವುದೇ ಇಲ್ಲ. ಬಂದರೂ ಯಾವಾಗ ಬಂದು ಹೋದರು ಎಂಬುದೇ ಗೊತ್ತಾಗುವುದಿಲ್ಲ.

ಗ್ರಾಮ ಪಂಚಾಯಿತಿ ಸದಸ್ಯನಿಂದ ಹಿಡಿದು ಮುಖ್ಯಮಂತ್ರಿಯವರೆಗೆ ವಾರದಲ್ಲಿ ಮೂರು ದಿನ ಕಡ್ಡಾಯವಾಗಿ ತಮ್ಮ ಕಚೇರಿಯಲ್ಲಿ ಇಂತಿಷ್ಟು ಗಂಟೆ ಇದ್ದು, ಜನರ ಕೆಲಸ ಮಾಡುವಂತೆ ಸರ್ಕಾರ ಯಾಕೆ ನಿಯಮ ರೂಪಿಸಬಾರದು? ಆಗಲಾದರೂ ಜನಪ್ರತಿ
ನಿಧಿಗಳು ರೆಸಾರ್ಟ್, ಪ್ರವಾಸ, ದೇವಸ್ಥಾನ ಎಂದೆಲ್ಲ ಸುತ್ತಿ ಸಮಯ ಹಾಗೂ ಜನರ ಹಣ ಪೋಲು ಮಾಡುವುದನ್ನು ತಪ್ಪಿಸಬಹುದು.

-ವಿ.ತಿಪ್ಪೇಸ್ವಾಮಿ, ಹಿರಿಯೂರು

Post Comments (+)