ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾನವೀಯತೆಗಿಂತ ಯಾವುದೂ ಹೆಚ್ಚಲ್ಲ

Last Updated 27 ಸೆಪ್ಟೆಂಬರ್ 2019, 20:00 IST
ಅಕ್ಷರ ಗಾತ್ರ

ಮಧ್ಯಪ್ರದೇಶದ ಗ್ರಾಮವೊಂದರಲ್ಲಿ ಬಯಲು ಶೌಚ ಮಾಡಿದ ಇಬ್ಬರು ದಲಿತ ಮಕ್ಕಳನ್ನು ಸಹೋದರರಿಬ್ಬರು ಹೊಡೆದು ಕೊಂದಿರುವ ಸುದ್ದಿ ಓದಿ ಮನಸ್ಸಿಗೆ ತುಂಬಾ ನೋವಾಯಿತು. ಈ ಘಟನೆಯನ್ನು ಕೇಳಿ ಇಡೀ ದೇಶವೇ ತಲೆತಗ್ಗಿಸುವಂತಾಗಿದೆ.

ಆ ಮಕ್ಕಳು ಮಾಡಿದ ತಪ್ಪಾದರೂ ಏನು? ಬಯಲು ಶೌಚ ಮಾಡಿದ್ದೇ ಘೋರ ಅಪರಾಧವಾಯಿತೇ? ಇನ್ನೊಂದು ಬಾರಿ ಈ ರೀತಿ ಗಲೀಜು ಮಾಡಬಾರದು ಎಂದು ತಿಳಿಹೇಳಿದ್ದರೆ ಅಮೂಲ್ಯವಾದ ಎರಡು ಜೀವಗಳು ಉಳಿಯುತ್ತಿದ್ದವು.

ಇತ್ತೀಚಿನ ದಿನಗಳಲ್ಲಿ ದಲಿತರ ಮೇಲೆ ಹಲವಾರು ಬಗೆಯ ದೌರ್ಜನ್ಯಗಳು ನಡೆಯುತ್ತಿವೆ. ಅದರಲ್ಲಿ ಇದೂ ಒಂದು ಎಂದು ಸುಮ್ಮನಾಗದೆ, ಆ ಮುಗ್ಧ ಜೀವಗಳನ್ನು ಬಲಿ ಪಡೆದವರಿಗೆ ಕಠಿಣ ಶಿಕ್ಷೆಯಾಗಬೇಕು. ಮನುಷ್ಯನಿಗೆ ಮಾನವೀಯತೆಗಿಂತ ಮತ್ತಾವುದೇ ವಿಷಯವೂ ಹೆಚ್ಚಾಗಬಾರದು.
-ರಾಜು ಬಿ. ಲಕ್ಕಂಪುರ,ಜಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT