ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ರಾಫಿಕ್‌ ವ್ಯವಸ್ಥೆ: ವೈಫಲ್ಯ ಗುರುತಿಸಿ

Last Updated 5 ಮಾರ್ಚ್ 2019, 20:15 IST
ಅಕ್ಷರ ಗಾತ್ರ

ಶಿವಮೊಗ್ಗದಲ್ಲಿ ಇತ್ತೀಚೆಗೆ ಟ್ರಾಫಿಕ್ ಸಿಗ್ನಲ್ ವ್ಯವಸ್ಥೆ ಹಾಳಾದ ಕಾರಣ, ನಮ್ಮ ಪೊಲೀಸ್ ಮಿತ್ರರೊಬ್ಬರು ವಿಜಲ್ ಹಿಡಿದು ಉರಿ ಬಿಸಿಲಿನಲ್ಲಿ ನಿಂತು, ಕೈ ಸನ್ನೆ ಮೂಲಕ ಸಂಚಾರ ನಿಯಂತ್ರಣ ಮಾಡುತ್ತಿದ್ದ ದೃಶ್ಯ ಕಣ್ಣಿಗೆ ಬಿದ್ದಿತು. ಇದು, ನಮ್ಮ ವ್ಯವಸ್ಥೆಗೆ ಹಿಡಿದ ಕೈಗನ್ನಡಿ. ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಮಹತ್ತರ ಸಾಧನೆ ಮಾಡುತ್ತಿದ್ದರೂ ನಮ್ಮ ದೈನಂದಿನ ಸಮಸ್ಯೆಗಳ ಪೈಕಿ ಒಂದಾಗಿರುವ ಟ್ರಾಫಿಕ್ ವ್ಯವಸ್ಥೆಯ ಸುಧಾರಣೆ ಆಗದಿರುವುದು ವಿಪರ್ಯಾಸ.

ಈಗಿನ ‘ನಿಗದಿತ ಸಮಯ ನಿರ್ವಹಣಾ ವ್ಯವಸ್ಥೆ’ ಇರುವ ಸಿಗ್ನಲ್‌ನಿಂದ, ವಾಹನ ದಟ್ಟಣೆ ಇಲ್ಲದಿದ್ದರೂ ಜನ ಹೆಚ್ಚಿನ ಸಮಯವನ್ನು ಸಿಗ್ನಲ್‌ನಲ್ಲಿ ಕಳೆಯಬೇಕಾಗಿರುವುದು ಇದರ ವೈಫಲ್ಯ. ಅಹಮದಾಬಾದ್ ಅಂತಹ ನಗರಗಳು ಸ್ವಲ್ಪ ಮುಂದುವರಿದು, ಇ-ಮೆಮೊ ವ್ಯವಸ್ಥೆ ಅಳವಡಿಸಿಕೊಂಡಿವೆ. ಈ ಮೂಲಕ 250ಕ್ಕೂ ಹೆಚ್ಚು ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ನಿಯಮ ಉಲ್ಲಂಘಿಸಿದವರಿಗೆ ತಕ್ಷಣವೇ ಮೆಮೊ ಜಾರಿ ಮಾಡಲಾಗುತ್ತದೆ. ಇಲ್ಲಿ ಎಲ್ಲವೂ ಸ್ವಯಂಚಾಲಿತ. ಇಂತಹ ವ್ಯವಸ್ಥೆಯನ್ನು ಕರ್ನಾಟಕವೂ ಅಳವಡಿಸಿಕೊಂಡರೆ ನಮ್ಮ ಪೊಲೀಸರು ರಸ್ತೆಯಲ್ಲಿ ನಿಂತು ಪರದಾಡುವ ಸ್ಥಿತಿ ತಪ್ಪುತ್ತದೆ ಮತ್ತು ಅವರ ಕಾರ್ಯಕ್ಷಮತೆಯೂ ಹೆಚ್ಚುತ್ತದೆ. ಮ್ಯಾಗ್ನೆಟಿಕ್ ಸೆನ್ಸರ್ ಮತ್ತು ಮೈಕ್ರೊ ಕಂಟ್ರೋಲರ್ ಬಳಕೆಯ ಮೂಲಕ ಕಡಿಮೆ ವಿದ್ಯುತ್ ಬಳಸಿ ಹೆಚ್ಚು ಸಮರ್ಥವಾಗಿ ಕಾರ್ಯನಿರ್ವಹಿಸಬಲ್ಲ ವಿಧಾನಗಳನ್ನು ಅಳವಡಿಸಿಕೊಂಡು, ಸಂಚಾರ ವ್ಯವಸ್ಥೆಯಲ್ಲಿ ಸುಧಾರಣೆ ತರಬೇಕಿದೆ.

ಶ್ವೇತಾ ನಾಗಪ್ಪ, ಶಿವಮೊಗ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT