ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕ ಪ್ರದರ್ಶನ: ಪಾರದರ್ಶಕತೆ ಶ್ಲಾಘನೀಯ

Last Updated 3 ಡಿಸೆಂಬರ್ 2020, 20:00 IST
ಅಕ್ಷರ ಗಾತ್ರ

2018ರಲ್ಲಿ ಏಕಗವಾಕ್ಷಿಯಡಿ ಮತ್ತು 2020ರಲ್ಲಿ ಪ್ರಥಮ ಮುದ್ರಣಗೊಂಡ, ರಾಜ್ಯ ಮಟ್ಟದ ಆಯ್ಕೆ ಸಮಿತಿಯಿಂದ ಆಯ್ಕೆಯಾದ ಮತ್ತು ಆಯ್ಕೆಯಾಗದ ಕನ್ನಡ ಪುಸ್ತಕಗಳ ಪ್ರದರ್ಶನವನ್ನು ಹಂಪಿಯಲ್ಲಿನ ಸಾರ್ವಜನಿಕ ಗ್ರಂಥಾಲಯದ ಗ್ರಂಥಾಂಗಣದಲ್ಲಿ ಇತ್ತೀಚೆಗೆ ಏರ್ಪಡಿಸಲಾಗಿತ್ತು. ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಕೃತಿಗಳನ್ನು ಅಚ್ಚುಕಟ್ಟಾಗಿ ಜೋಡಿಸಿದ್ದರಿಂದ ಲೇಖಕ, ಪ್ರಕಾಶಕರಿಗೆ ತಮ್ಮ ಪ್ರಕಟಣೆ ಆಯ್ಕೆಯಾಗಿರುವುದನ್ನು ಹದಿನೈದು– ಇಪ್ಪತ್ತು ನಿಮಿಷಗಳಲ್ಲೇ ಗುರುತಿಸಲು ಸಾಧ್ಯವಾಗುವಂತಿತ್ತು. ಆಯ್ಕೆ ಸಮಿತಿಯ ಅಧ್ಯಕ್ಷರು ಉಪಸ್ಥಿತರಿದ್ದುದರಿಂದ, ಆಯ್ಕೆಯಾಗದ ಪುಸ್ತಕದ ಬಗ್ಗೆ ಅವರಿಂದ ಸ್ಥಳದಲ್ಲಿಯೇ ವಿವರಣೆ ತಿಳಿಯಲು ಅನುಕೂಲವಿತ್ತು. ಸಾರ್ವಜನಿಕ ಗಂಥಾಲಯ ಇಲಾಖೆಯು ಆಯ್ಕೆಯಲ್ಲಿ ಇಂತಹ ಪಾರದರ್ಶಕತೆಯನ್ನು ಕಾಯ್ದುಕೊಂಡಿದ್ದು ಅತ್ಯಂತ ಶ್ಲಾಘನೀಯ.

ಡಾ. ದೊಡ್ಡರಂಗೇಗೌಡರ ಅಧ್ಯಕ್ಷತೆಯಲ್ಲಿ ಒಂದೆರಡು ತಿಂಗಳ ಹಿಂದಷ್ಟೇ ರಚನೆಯಾದ ಆಯ್ಕೆ ಸಮಿತಿಯು ಶೀಘ್ರದಲ್ಲಿ ಆಯ್ಕೆ ಪ್ರಕ್ರಿಯೆ ಮುಗಿಸಿ ಪುಸ್ತಕ ಖರೀದಿಗೆ ಅವಕಾಶ ಕಲ್ಪಿಸಿರುವುದು, ಕೋವಿಡ್ ಮನೆವಾಸದಲ್ಲಿ ಕೃತಿಗಳನ್ನು ಗ್ರಂಥಾಲಯಗಳಿಗೆ ಒದಗಿಸಿ ಸಾರ್ವಜನಿಕರಿಗೆ ಓದಲು ಅನುವು ಮಾಡಿಕೊಟ್ಟಿರುವುದು ಸ್ವಾಗತಾರ್ಹ. 2019ರಲ್ಲಿ ಏಕಗವಾಕ್ಷಿಯಡಿ ಪುಸ್ತಕಗಳನ್ನು ಆಯ್ಕೆಗಾಗಿ ಸ್ವೀಕರಿಸಿ ಈಗಾಗಲೇ ಹತ್ತು ತಿಂಗಳ ಮೇಲಾಗಿದೆ. ಅವುಗಳ ಆಯ್ಕೆ ಪ್ರಕ್ರಿಯೆಯನ್ನು ಆದಷ್ಟು ಬೇಗ ಕೈಗೊಂಡರೆ ಕನ್ನಡ ಓದುಗರಿಗೆ ತುಂಬ ಅನುಕೂಲ
ವಾಗುತ್ತದೆ. ಸರ್ಕಾರವೂ ತ್ವರಿತವಾಗಿ ಸ್ಪಂದಿಸಿ ಖರೀದಿಗೆ ಹಣ ಬಿಡುಗಡೆ ಮಾಡುತ್ತದೆ ಎನ್ನುವುದು ಓದುಗರ ನಿರೀಕ್ಷೆಯಾಗಿದೆ.

ಸತ್ಯಬೋಧ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT