ಶುಕ್ರವಾರ, ನವೆಂಬರ್ 22, 2019
25 °C

ನೆಮ್ಮದಿಗೆ ಭಂಗ ಬೇಡ

Published:
Updated:

ರಾಜ್ಯದಾದ್ಯಂತ ಹಲವಾರು ಅಂಗಡಿ ಮುಂಗಟ್ಟು, ವಾಣಿಜ್ಯ ಮಳಿಗೆಗಳ ಮಾಲೀಕರು ತಮ್ಮ ಮಳಿಗೆಗಳ ಮುಂದೆ ಇರುವ ಮರಗಳಿಗೆ ಆಕರ್ಷಕ ವಿದ್ಯುತ್ ದೀಪಾಲಂಕಾರವನ್ನು ಮಾಡಿರುತ್ತಾರೆ.

ಕೆಲವು ಕಡೆ ರೆಂಬೆ-ಕೊಂಬೆಗಳಿಗೂ ಈ ಅಲಂಕಾರವನ್ನು ವಿಸ್ತರಿಸಲಾಗಿರುತ್ತದೆ. ಇದರಿಂದ ಇವರ ವ್ಯಾಪಾರ ವಹಿವಾಟು ಜೋರಾಗಿಯೇ ನಡೆಯಬಹುದು. ಆದರೆ, ಮರದ ಆಶ್ರಯವನ್ನೇ ಅವಲಂಬಿಸಿರುವ ಅದೆಷ್ಟೋ ಕ್ರಿಮಿ ಕೀಟಗಳು, ಪಕ್ಷಿಗಳು, ಅಳಿಲುಗಳು ತೊಂದರೆಗೆ ಒಳಗಾಗುವುದರ ಜೊತೆಗೆ ಅವುಗಳ ಜೀವಕ್ಕೇ ಮಾರಕವಾಗುವ ಸಂಭವ ಇರುತ್ತದೆ.

ಸಂಬಂಧಪಟ್ಟ ಅಧಿಕಾರಿಗಳು ಮತ್ತು ಪೊಲೀಸರು ವಿದ್ಯುತ್ ದೀಪಗಳನ್ನು ತೆರವುಗೊಳಿಸುವಂತೆ ಮಾಲೀಕರಿಗೆ ಕಟ್ಟುನಿಟ್ಟಾಗಿ ಸೂಚಿಸಿ, ಮರವನ್ನೇ ಆಶ್ರಯಿಸಿರುವ ಜೀವಿಗಳು ನೆಮ್ಮದಿಯಾಗಿ ಬದುಕಲು ಸಹಕರಿಸಬೇಕು.

ಬಿ.ಗಣೇಶ, ಮೈಸೂರು

ಪ್ರತಿಕ್ರಿಯಿಸಿ (+)