ವಿ.ವಿ. ಬೆಳವಣಿಗೆಯಲ್ಲಿ ಯುಜಿಸಿ ಪಾತ್ರ ಮರೆತರೇ?

7

ವಿ.ವಿ. ಬೆಳವಣಿಗೆಯಲ್ಲಿ ಯುಜಿಸಿ ಪಾತ್ರ ಮರೆತರೇ?

Published:
Updated:

ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಮಲ್ಲಿಕಾ ಘಂಟಿ ಅವರು ಚಂದ್ರಶೇಖರ ಕಂಬಾರರಿಗೆ ಸನ್ಮಾನ ಮಾಡಲು ಏರ್ಪಡಿಸಿದ್ದ ಸಮಾರಂಭದಲ್ಲಿ (ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ) ಮಾತನಾಡುತ್ತಾ, ‘ಕನ್ನಡ ವಿಶ್ವವಿದ್ಯಾಲಯವನ್ನು ಯುಜಿಸಿಯಿಂದ ಬಿಡಿಸಬೇಕು. ಇದಕ್ಕೆ ಕಂಬಾರರು ದೆಹಲಿಯಲ್ಲಿ ಧ್ವನಿ ಎತ್ತಬೇಕು’ ಎಂದು ಕರೆ ಕೊಟ್ಟಿದ್ದಾರೆ (ಪ್ರ.ವಾ., ಬಳ್ಳಾರಿ ಆವೃತ್ತಿ, ನ. 23). ಈ ವಿಶ್ವವಿದ್ಯಾಲಯದ ಕುಲಪತಿಯಾಗಿ ರೂಸೊ, ಯುಜಿಸಿ, ಎಚ್‌ಆರ್‌ಡಿಯಿಂದ ಬಂದ ಕೋಟ್ಯಂತರ ರೂಪಾಯಿಗಳಲ್ಲಿ ‘ಕಟ್ಟಡಗಳನ್ನು ಕಟ್ಟಿ’ ಈಗ ಇದ್ದಕ್ಕಿದ್ದಂತೆ ಹೀಗೆ ಹೇಳಿಕೆ ಕೊಡುವುದು ಎಷ್ಟು ಸರಿ?

ಕಳೆದ ವರ್ಷ ಕನ್ನಡ ವಿಶ್ವವಿದ್ಯಾಲಯವು ‘ಬೆಳ್ಳಿ ಹಬ್ಬ’ ಆಚರಿಸಿತು. ಆಗ, ಕಳೆದ 20–25 ವರ್ಷಗಳಲ್ಲಿ ಕಟ್ಟಡಗಳಿಗೆ, ಸಂಶೋಧನಾ ಯೋಜನೆಗಳಿಗೆ ಯುಜಿಸಿಯಿಂದ ಸುಮಾರು ನೂರು ಕೋಟಿವರೆಗೂ ಹಣ ಬಂದಿದೆ ಎಂದು ಓದಿದ್ದೆ. ಆದ್ದರಿಂದ ಹೀಗೆ ಆ ವಿಶ್ವವಿದ್ಯಾಲಯದ ಬೆಳವಣಿಗೆಯಲ್ಲಿ ಯುಜಿಸಿಯ ಪಾತ್ರ ದೊಡ್ಡದಿರುವಾಗ, ಈಗ ಹೀಗೆ ಮಾತನಾಡುವುದು ಎಷ್ಟು ಸಮಂಜಸ?

ಅದರಲ್ಲೂ 25 ವರ್ಷಗಳಾದ ಮೇಲೆ ಯುಜಿಸಿ ಬೇಡ ಅಂದರೆ ಹೇಗೆ? ಈ ಅವಧಿಯಲ್ಲಿ ಅಲ್ಲಿ ಎಂ.ಎ. ಮತ್ತು ಪಿಎಚ್.ಡಿ. ಪದವಿಗಳಿಗೆ ಯುಜಿಸಿ ಮಾನ್ಯತೆ ನೀಡಿದೆ. ಅದನ್ನು ಪಡೆದಿರುವವರ ಮತ್ತು ಈಗಾಗಲೇ ಅನೇಕ ಕಡೆ ಕೆಲಸ ಪಡೆದಿರುವವರ ಗತಿಯೇನು? ಈ ಹಿಂದೆ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ಕುಲಪತಿಯೊಬ್ಬರು ‘ನಮ್ಮ ವಿ.ವಿಗೆ ಯುಜಿಸಿಯ ಮಾನ್ಯತೆ ಬೇಕಿಲ್ಲ’ ಎಂದು ಹೇಳಿದ್ದರು. ನಂತರ ಆ ವಿಶ್ವವಿದ್ಯಾಲಯದ ಕಥೆ ಏನಾಯ್ತು? ಅಲ್ಲಿ 3–4 ವರ್ಷಗಳಿಂದ ವಿದ್ಯಾರ್ಥಿಗಳ, ಸಿಬ್ಬಂದಿಯ, ಬೋಧಕರ ಕಥೆ ಏನಾಯ್ತು ಎಂಬುದು ಎಲ್ಲರಿಗೂ ತಿಳಿದಿದೆ.

Tags: 

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !