ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರೆಯಲಾಗದ ಕಿಟ್ಟೆಲ್‌ ಮಹಾಶಯ

Last Updated 13 ಡಿಸೆಂಬರ್ 2020, 19:45 IST
ಅಕ್ಷರ ಗಾತ್ರ

ಕರ್ನಾಟಕದಲ್ಲಿ ಪ್ರಥಮವಾಗಿ ಮುದ್ರಣಾಲಯ ಸ್ಥಾಪಿಸಿ, ಕನ್ನಡ ಮುದ್ರಣ ಮೊಳೆಗಳ ಸಂಶೋಧನೆಯಲ್ಲಿ ಅಪಾರ ಸೇವೆ ಸಲ್ಲಿಸಿದ್ದ, ಕಿಟ್ಟೆಲ್‌ ಅವರ ಖ್ಯಾತ ಕನ್ನಡ ನಿಘಂಟನ್ನು ಮುದ್ರಿಸಿ ಪ್ರಕಟಿಸಿದ್ದ ಮಂಗಳೂರಿನ ಬಾಸೆಲ್‌ ಮಿಷನ್‌ ಮುದ್ರಣಾಲಯವು ಶಾಶ್ವತವಾಗಿ ಮುಚ್ಚಿದ ಸುದ್ದಿಯನ್ನು ಓದಿ (ಪ್ರ.ವಾ., ಡಿ. 11– 50 ವರ್ಷಗಳ ಹಿಂದೆ) ನೋವುಂಟಾಯಿತು.

ಎಲ್ಲಿಂದಲೋ ಬಂದು ನಮ್ಮ ಕನ್ನಡ ಭಾಷೆಯ ಬಗ್ಗೆ ಅಪಾರ ಪ್ರೀತಿ, ಪ್ರೇಮ, ಗೌರವ, ಆಸಕ್ತಿಯಿಂದ ಆ ಕಿಟ್ಟೆಲ್ ಮಹಾಶಯ ನಮ್ಮ ಕನ್ನಡ ಭಾಷೆಗೆ ಒಂದು ಅತ್ಯುತ್ತಮ, ಅತ್ಯುಪಯುಕ್ತ ಕನ್ನಡ ನಿಘಂಟನ್ನು ಮುದ್ರಿಸಿ ನೀಡಿದ್ದು ಈಗ ಇತಿಹಾಸ! ಈ ವಿಶೇಷ ನಿಘಂಟನ್ನು ಮುದ್ರಿಸಿದ ನಮ್ಮ ಕರಾವಳಿಯ ಮುದ್ರಣಾಲಯ ಮುಚ್ಚಿದ ಸುದ್ದಿ ಓದಿ ಬೇಸರ ಆಯಿತು. ಆದರೆ, ಕನ್ನಡ ಭಾಷೆ ಇರುವವರೆಗೂ ಆ ಕಿಟ್ಟೆಲ್ ಮಹಾಶಯ, ಪ್ರಾತಃಸ್ಮರಣೀಯ, ಅಮರ ಎನ್ನುವುದರಲ್ಲಿ ಸಂಶಯವಿಲ್ಲ.

–ನಾರಾಯಣ ಯಾಜಿ, ಶಿರಾಲಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT