ಬುಧವಾರ, ಆಗಸ್ಟ್ 4, 2021
26 °C

ಗುಣಮಟ್ಟದ ಪಠ್ಯಗಳು ಸೇರ್ಪಡೆಯಾಗಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಏಕರೂಪದ ಪಠ್ಯಕ್ರಮವು ಹಿಂದುಳಿಯುವಿಕೆ ಹಾಗೂ ಪ್ರಾದೇಶಿಕ ತಾರತಮ್ಯಕ್ಕೆ ಕಾರಣವಾಗುತ್ತದೆ ಎಂದು ಮೀನಾಕ್ಷಿ ಬಾಳಿ ಅವರು ಕಲ್ಯಾಣ ಕರ್ನಾಟಕ ಭಾಗದ ಶೈಕ್ಷಣಿಕ ಮಟ್ಟವನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಹೇಳಿ ದಂತಿದೆ (ಸಂಗತ, ಮೇ 26). ಹಳೆಮೈಸೂರು ಪ್ರಾಂತ್ಯ, ಮುಂಬೈ ಕರ್ನಾಟಕ ಹಾಗೂ ಕರಾವಳಿ ಜಿಲ್ಲೆಗಳ ಪ್ರದೇಶ ಗಳು ಬ್ರಿಟಿಷರ ಆಡಳಿತಕ್ಕೆ ಒಳಪಟ್ಟಿದ್ದವು. ಆಗಲೇ ಏಕರೂಪದ ಉತ್ತಮ ಶೈಕ್ಷಣಿಕ ವಾತಾವರಣವನ್ನು ಹೊಂದಿದ್ದರಿಂದ, ಆ ಪ್ರದೇಶಗಳಿಗೆ ತರತಮದ ಭಾವನೆ ಬಂದಂತಿಲ್ಲ. ಇಂದು ಈ ಪ್ರದೇಶಗಳು ಶೈಕ್ಷಣಿಕವಾಗಿ ಬಹಳಷ್ಟು ಮುಂದಿವೆ.

ಹಿಂದುಳಿದ ಹಾಗೂ ಪ್ರಾದೇಶಿಕ ತರತಮದ ಹಣೆಪಟ್ಟಿಯನ್ನು ಕಟ್ಟಿಕೊಂಡ ಕಲ್ಯಾಣ ಕರ್ನಾಟಕದ ಭಾಗವು ಶತಮಾನಗಳಿಂದಲೂ ಶೈಕ್ಷಣಿಕವಾಗಿ ಹಿಂದುಳಿದಿರುವುದು ಐತಿಹಾಸಿಕ ದುರಂತ. ಇಲ್ಲಿ ಶೈಕ್ಷಣಿಕ ಸೌಲಭ್ಯಗಳು ಸಿಕ್ಕಿರುವುದು ಇತ್ತೀಚೆಗಷ್ಟೇ. ಇಲ್ಲಿ ಬೌದ್ಧಿಕ ಧಾರಣಾಶಕ್ತಿ ಹಾಗೂ ಅಧ್ಯಯನಶೀಲತೆಯ ಕೊರತೆ ಎದ್ದುಕಾಣುತ್ತದೆ. ಈ ಭಾಗದ ಪಠ್ಯಗಳು ಮೈಸೂರು ಮತ್ತು ಕರ್ನಾಟಕ ವಿಶ್ವವಿದ್ಯಾಲಯದ ಪಠ್ಯಗಳಂತೆ ರಚನೆಯಾಗಬೇಕು. ಇಂತಹ ಗುಣಮಟ್ಟದ ಪಠ್ಯಗಳು ಉದ್ದೇಶಿತ ಏಕರೂಪ ಪಠ್ಯಗಳಲ್ಲಿ ಸೇರುವುದರಿಂದ ಪ್ರಾದೇಶಿಕ ಭಾವನೆಗೆ ಧಕ್ಕೆ ಬಾರದು.

-ಪ್ರೊ. ಶಾಶ್ವತಸ್ವಾಮಿ ಮುಕ್ಕುಂದಿಮಠ, ಸಿಂಧನೂರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು