ಸೂಕ್ತ ವಿಶ್ಲೇಷಣೆ ನಡೆಯಲಿ
ಉತ್ತರಪ್ರದೇಶದ ಬುಲಂದ್ಶಹರ್ ಜಿಲ್ಲೆಯ ಶಾಲೆಯೊಂದರಲ್ಲಿ ಆಸನದ ವಿಷಯಕ್ಕಾಗಿ 10ನೇ ತರಗತಿ ವಿದ್ಯಾರ್ಥಿಗಳಿಬ್ಬರ ನಡುವಿನ ಜಗಳವು ಒಬ್ಬ ವಿದ್ಯಾರ್ಥಿಯ ಕೊಲೆಯಲ್ಲಿ ಅಂತ್ಯವಾಗಿದೆಯಂತೆ. ಜಗಳದಲ್ಲಿ ಕೆರಳಿದ ವಿದ್ಯಾರ್ಥಿಯೊಬ್ಬ ಮಾರನೇ ದಿನ, ಸೇನೆಯಲ್ಲಿದ್ದ ತನ್ನ ಚಿಕ್ಕಪ್ಪನ ಗನ್ ಅನ್ನು ತರಗತಿಗೆ ತಂದು, ತನ್ನ ಎದುರಾಳಿ ವಿದ್ಯಾರ್ಥಿಯ ತಲೆ, ಎದೆ ಮತ್ತು ಹೊಟ್ಟೆಗೆ ಗುಂಡು ಹಾರಿಸಿ ಕೊಲೆ ಮಾಡಿದ್ದಾನಂತೆ. ಇದೊಂದು ಆಘಾತಕಾರಿ ಸುದ್ದಿ. ಬಾಲಕ ಇಷ್ಟೊಂದು ಕ್ರೌರ್ಯ ಮೆರೆಯುವುದಕ್ಕೆ ಕಾರಣವಾದ ಅಂಶಗಳ ಬಗ್ಗೆ ಸೂಕ್ತ ವಿಶ್ಲೇಷಣೆ ನಡೆಯಬೇಕು.
– ರಮಾನಂದ ಶರ್ಮಾ, ಬೆಂಗಳೂರು
ಪ್ರಜಾವಾಣಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.